VD Savarkar

ಸಾವರ್ಕರ್ ಪಠ್ಯ ಕೈ ಬಿಟ್ಟ ಕರ್ನಾಟಕ ಸರ್ಕಾರಕ್ಕೆ 'ನ್ಯೂಟನ್' ತತ್ವ ಉಲ್ಲೇಖಿಸಿ ಮೊಮ್ಮಗ ತಿರುಗೇಟು!
ಸಾವರ್ಕರ್ ಪಠ್ಯ ಕೈ ಬಿಟ್ಟ ಕರ್ನಾಟಕ ಸರ್ಕಾರಕ್ಕೆ ಅವರ ಮೊಮ್ಮಗ ತಿರುಗೇಟು ನೀಡಿದ್ದು, 'ನ್ಯೂಟನ್' ತತ್ವ ಉಲ್ಲೇಖಿಸಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರವು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ವಿಡಿ ಸಾವರ್ಕರ್ ಜನ್ಮದಿನ: ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್, ಸಚಿವರು ಸೇರಿ ಗಣ್ಯರಿಂದ ನಮನ
ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಹಲವಾರು ಕೇಂದ್ರ ಸಚಿವರು ಮತ್ತು ಸಂಸದರು ವಿ.ಡಿ ಸಾವರ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ನನ್ನ ತಾತ ಬ್ರಿಟಿಷರಲ್ಲಿ ಕ್ಷಮೆಯಾಚಿಸಿರುವುದನ್ನು ಸಾಬೀತುಪಡಿಸಿ: ರಾಹುಲ್ ಗಾಂಧಿಗೆ ಸಾವರ್ಕರ್ ಮೊಮ್ಮಗ ಸವಾಲು
ನನ್ನ ಹೆಸರು ಸಾವರ್ಕರ್ ಅಲ್ಲ, ಗಾಂಧಿ. ಗಾಂಧಿ ಎಂದಿಗೂ ಕ್ಷಮೆ ಕೇಳುವುದಿಲ್ಲ' ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹಿಂದೂ ರಾಷ್ಟ್ರವಾದಿ ವಿ.ಡಿ. ಸಾವರ್ಕರ್ ಅವರ ಮೊಮ್ಮಗ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಸಾವರ್ಕರ್ ಕುರಿತ ಹೇಳಿಕೆಗೆ ಆಕ್ರೋಶ, ವಿಪಕ್ಷಗಳ ಸಭೆಗೆ ಉದ್ಧವ್ ಗೈರು ಬೆನ್ನಲ್ಲೇ ಪ್ರತಿಪಕ್ಷಗಳ ಹೊಸ 'ಸಂಕಲ್ಪ'
ಸ್ವಾತಂತ್ರ್ಯ ಹೋರಾಟಗಾರ ವಿಡಿ ಸಾವರ್ಕರ್ ಕುರಿತಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿಪಕ್ಷಗಳ ಸಭೆಯಿಂದ ದೂರ ಉಳಿದ ಬೆನ್ನಲ್ಲೇ ಎಚ್ಚೆತ್ತಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸಾವರ್ಕರ್ ಕುರಿತು ಹೊಸ 'ಸಂಕಲ್ಪ' ಮಾಡಿವೆ.

ಸಾವರ್ಕರ್ ವಿರುದ್ಧ ಹೇಳಿಕೆ: ರಾಹುಲ್ ವಿರುದ್ಧ ಉತ್ತರಪ್ರದೇಶ ನ್ಯಾಯಾಲಯದಲ್ಲಿ ದೂರು ದಾಖಲು
ಭಾರತ್ ಜೋಡೋ ಕಾರ್ಯಾಕ್ರಮದ ವೇಳೆ ಮಹಾರಾಷ್ಟ್ರದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಗಣೇಶೋತ್ಸವಗಳಲ್ಲಿ ಸಾವರ್ಕರ್ ಫೋಟೋ ಹಾಕುವ ಯೋಜನೆ: ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ
ವಿವಿಧ ಗಣೇಶ ಚತುರ್ಥಿ ಸಂಘಗಳ ಒಕ್ಕೂಟವಾದ ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿಯು ಸೋಮವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿ ಮಾಡಿ, ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಪಾಲಿಕೆಗೆ ಮನವಿ ಮಾಡಿದೆ.

ಗಣೇಶೋತ್ಸವಕ್ಕೆ ಸಾವರ್ಕರ್ ಏಕೆ? ಲೋಕಲ್ ನಾಯಕರ ಆಯ್ಕೆ ಮಾಡಿ: ಶಂಕರ್ ನಾಗ್ ಅಭಿಮಾನಿಗಳ ಸಂಘ ಒತ್ತಾಯ
ರಾಜ್ಯ ಸರ್ಕಾರವೂ ಸಾವರ್ಕರ್ ಉತ್ಸವ ಬದಲು ಈ ಬಾರಿ ಗಣೇಶೋತ್ಸವದೊಂದಿಗೆ ಕನ್ನಡ ಚಿತ್ರರಂಗದ ಸ್ಥಳೀಯ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಶಂಕರ್ ನಾಗ್ ಅಭಿಮಾನಿಗಳ ಸಂಘ ಒತ್ತಾಯಮಾಡಿದೆ.

ಕಾಲ ಪಾನಿ ಜೈಲಿನಲ್ಲಿ ಸಾವರ್ಕರ್ 11 ವರ್ಷ ಪಟ್ಟ ಕಷ್ಟಗಳನ್ನು 'ನಕಲಿ' ಗಾಂಧಿಗಳು ಎಂದಿಗೂ ಅನುಭವಿಸಲಿಲ್ಲ: ಪ್ರಹ್ಲಾದ್ ಜೋಶಿ
ಕಾಲ ಪಾನಿ ಜೈಲಿನಲ್ಲಿ 11 ವರ್ಷಗಳ ಸಾವರ್ಕರ್ ಎದುರಿಸಿದ ಕಷ್ಟಗಳನ್ನು ಈಗಿರುವ ಯಾವುದೇ 'ನಕಲಿ' ಗಾಂಧಿಗಳು ಎಂದಿಗೂ ಅನುಭವಿಸಲಿಲ್ಲ ಎಂದು ಜೋಶಿ ತಿಳಿಸಿದ್ದಾರೆ.

ಉಡುಪಿ: ವೀರ್ ಸಾವರ್ಕರ್ ಪ್ರತಿಮೆ ಸ್ಥಾಪಿಸಲು ಬಿಜೆಪಿ ಮುಖಂಡರಿಂದ ಮನವಿ
ಉಡುಪಿಯ ಬ್ರಹ್ಮಗಿರಿ ವೃತ್ತದಲ್ಲಿ ಕಳೆದ ಬುಧವಾರ ವೀರ್ ಸಾವರ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಉಡುಪಿಯ ಸಿಎಂಸಿ ಆಯುಕ್ತ ಉದಯ ಶೆಟ್ಟಿ ಅವರಿಗೆ ಗುರುವಾರ ಅದೇ ಸ್ಥಳದಲ್ಲಿ ಸಾವರ್ಕರ್ ಪ್ರತಿಮೆ ನಿರ್ಮಿಸಲು ಮನವಿ ಸಲ್ಲಿಸಿದ್ದಾರೆ.

