ದೇಶ

ರಾಜಸ್ಥಾನದ ಬಾರ್ಮರ್ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ ಮೊದಲ ತುರ್ತು ಭೂಸ್ಪರ್ಶ ನೆಲೆ ಉದ್ಘಾಟನೆ

ರಾಜಸ್ತಾನದ ಬರ್ಮಾರ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾಗಿರುವ ತುರ್ತು ಭೂಸ್ಪರ್ಶ ನೆಲೆ(ಇಎಲ್ಎಫ್)ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.

ರಾಜಸ್ಥಾನದ ಬಾರ್ಮರ್ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ ಮೊದಲ ತುರ್ತು ಭೂಸ್ಪರ್ಶ ನೆಲೆ ಉದ್ಘಾಟನೆ
ಭಾರತೀಯ ವಾಯುಪಡೆ ವಿಮಾನಗಳು
Published On :

ಬಾರ್ಮರ್: ರಾಜಸ್ತಾನದ ಬರ್ಮಾರ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾಗಿರುವ ತುರ್ತು ಭೂಸ್ಪರ್ಶ ನೆಲೆ(ಇಎಲ್ಎಫ್)ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು. 

ಬರ್ಮಾರ್ ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ ಭಾರತೀಯ ವಾಯುಪಡೆ ವಿಮಾನಗಳ ಭೂ ಸ್ಪರ್ಶಕ್ಕಾಗಿ ಬಳಸುತ್ತಿರುವ ಭಾರತದ ಮೊದಲ ರಾಷ್ಟ್ರೀಯ ಹೆದ್ದಾರಿಯಾಗಿದೆ. 

ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ, ಬಿಪಿನ್ ರಾವತ್ ಅವರನ್ನು ಹೊತ್ತ ಭಾರತೀಯ ವಾಯುಪಡೆಯ ಎ ಹರ್ಕ್ಯುಲಸ್ ಸಿ-130ಜೆ ವಿಮಾನ ಗುರುವಾರ ಈ ಹೆದ್ದಾರಿಯಲ್ಲಿ ಅಣುಕು ತುರ್ತು ಭೂಸ್ಪರ್ಶ ಮಾಡಿತು. 

ಸುಖೋಯ್ -30 ಎಂಕೆಐ ಫೈಟರ್‌ನಿಂದ ಆರಂಭಿಸಿ ಅನೇಕ ಲ್ಯಾಂಡಿಂಗ್ ಮತ್ತು ಟಚ್‌ಡೌನ್ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಎಎನ್-32 ಮಿಲಿಟರಿ ಸಾರಿಗೆ ವಿಮಾನ ಮತ್ತು ಐಎಎಫ್ ನ ಎಂಐ-17v5 ಹೆಲಿಕಾಪ್ಟರ್ ಸಹ ಇಎಲ್ಎಫ್ ನಲ್ಲಿ ಇಳಿಯಿತು. ಇದು ಸಹಾಯಕ ಮಿಲಿಟರಿ ವಾಯುನೆಲೆಯಾಗಿ ಕಾರ್ಯನಿರ್ವಹಿಸಲು ತನ್ನ ಸಂಪೂರ್ಣ ಕಾರ್ಯಾಚರಣೆಯ ಸಿದ್ಧತೆಯನ್ನು ತೋರಿಸುತ್ತದೆ.

ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ 925ರ ಸತ್ತಾ-ಗಾಂಧವ್ ಸ್ಟ್ರೆಚ್ ನಲ್ಲಿ 3 ಕಿ.ಮೀ ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.