ಆರ್ಯನ್ ಖಾನ್ ಡ್ರಗ್ ಪ್ರಕರಣ ಪ್ರಮುಖ ಸಾಕ್ಷಿ ಕಿರಣ್ ಗೋಸಾವಿ 8 ದಿನಗಳ ಕಾಲ ಪೊಲೀಸ್ ವಶಕ್ಕೆ
ಎನ್ ಸಿ ಬಿ ಆರ್ಯನ್ ಖಾನ್ ರನ್ನು ವಶಕ್ಕೆ ಪಡೆದ ದಿನಗಳಲ್ಲೇ ಗೋಸಾವಿ, ಆರ್ಯನ್ ಖಾನ್ ಜೊತೆ ಇರುವ ಸೆಲ್ಫಿ ಮತ್ತು ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು.

ಮುಂಬೈ: ಆರ್ಯನ್ ಖಾನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಕಿರಣ್ ಗೋಸಾವಿಯನ್ನು ಪುಣೆ ನ್ಯಾಯಾಲಯ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ೮ ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಎನ್ ಸಿ ಬಿ ಆರ್ಯನ್ ಖಾನ್ ರನ್ನು ವಶಕ್ಕೆ ಪಡೆದ ದಿನಗಳಲ್ಲೇ ಗೋಸಾವಿ, ಆರ್ಯನ್ ಖಾನ್ ಜೊತೆ ಇರುವ ಸೆಲ್ಫಿ ಮತ್ತು ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಒಡನೆಯೇ ಪುಣೆಯ ಪೊಲೀಸರು 2018ರ ಹಣ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಗೋಸಾವಿ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದರು.
2018ರ ಹಣವಂಚನೆ ಪ್ರಕರಣದಡಿ ಬಂಧಿತನಾಗಿರುವ ಗೋಸಾವಿಯನ್ನು ಪುಣೆ ನ್ಯಾಯಾಲಯ 8 ದಿನಗಳ ಕಾಲ ಪೊಲಿಸ್ ವಶಕ್ಕೆ ಒಪ್ಪಿಸಿದೆ.
ಗೋಸಾವಿ ಬಳಿ ಚಾಲಕನಾಗಿದ್ದ ಪ್ರಭಾಕರ್ ಎಂಬಾತ ಆರ್ಯನ್ ಖಾನ್ ಹಡಗಿನಿಂದ ಬಂಧನವಾದ ನಂತರ ಗೋಸಾವಿ ವ್ಯಕ್ತಿಯಿಂದ 50 ಲಕ್ಷ ರೂ. ಹಣ ಪಡೆಯುವುದನ್ನು ನೋಡಿದ್ದಾಗಿ ಹೇಳಿದ್ದ. ಅಲ್ಲದೆ ವಾಂಖಡೆ ಹಾಗೂ ಆತನ ಸಹವರ್ತಿಗಳು ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ. ಬೇಡಿಕೆ ಇಟ್ಟಿದ್ದಾಗಿ ಬಾಯಿಬಿಟ್ಟಿದ್ದ.
Related Article
ಆರ್ಯನ್ ಖಾನ್ ಬಿಡುಗಡೆಗೆ ಲಂಚ ಬೇಡಿಕೆ ಆರೋಪ: ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖಡೆ ವಿರುದ್ಧ ಮತ್ತೊಂದು ಪ್ರಕರಣ ದಾಖಲು
ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್, ಇತರ ಇಬ್ಬರಿಗೆ ಬಾಂಬೆ ಹೈಕೋರ್ಟ್ ನಿಂದ ಜಾಮೀನು
ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ಗೆ ಇಂದೂ ಸಿಗದ ಜಾಮೀನು, ವಿಚಾರಣೆ ನಾಳೆಗೆ ಮುಂದೂಡಿಕೆ
ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಗೆ ಇಂದೂ ಜಾಮೀನಿಲ್ಲ, ವಿಚಾರಣೆ ನಾಳೆಗೆ ಮುಂದೂಡಿಕೆ
ಆರ್ಯನ್ ಖಾನ್ ಡ್ರಗ್ಸ್ ಸೇವಿಸುವುದಲ್ಲದೆ ಡ್ರಗ್ಸ್ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ: ಹೈಕೋರ್ಟ್‌ಗೆ ಎನ್‌ಸಿಬಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


