ದೇಶ

ಭಾರತ ವಿರುದ್ಧದ ಪಾಕ್ ಗೆಲುವು ಸಂಭ್ರಮಾಚರಣೆ: ರಾಜಸ್ಥಾನ ಶಿಕ್ಷಕಿ ಕೆಲಸದಿಂದ ವಜಾ

ನಫೀಸಾ ಅವರ ವಾಟ್ಸಾಪ್ ಸ್ಟೇಟಸ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಶಾಲಾ ಆಡಳಿತದ ಗಮನಕ್ಕೂ ಬಂದಿತ್ತು.

ಭಾರತ ವಿರುದ್ಧದ ಪಾಕ್ ಗೆಲುವು ಸಂಭ್ರಮಾಚರಣೆ: ರಾಜಸ್ಥಾನ ಶಿಕ್ಷಕಿ ಕೆಲಸದಿಂದ ವಜಾ
ಸಾಂದರ್ಭಿಕ ಚಿತ್ರ
Published On :

ಜೈಪುರ: ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕ್ ಗೆಲುವನ್ನು ಸಂಭ್ರಮಿಸಿದ್ದ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯೊಂದರ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.

ನಫೀಸಾ ಅಟಾರಿ ಎಂಬಾಕೆ ಅಮಾನತು ಶಿಕ್ಷೆಗೆ ಒಳಗಾದ ಶಿಕ್ಷಕಿ. ಉದಯ್ಪುರದ ನೀರಜಾ ಮೋದಿ ಖಾಸಗಿ ಶಾಲೆಯಲ್ಲಿ ಆಕೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 

ಭಾನುವಾರ ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು ಕೋಟ್ಯಂತರ ಭಾರತೀಯರಿಗೆ ತೀವ್ರ ಹತಾಶೆಯುಂಟುಮಾಡಿತ್ತು. ಆದರೆ ಆ ಸಮಯದಲ್ಲಿ ನಫೀಸಾ ಅವರು 'ಜೀತ್ ಗಯಿ, ನಾವು ಗೆದ್ದೆವು' ಎಂದು ವಾಟ್ಸಾಪ್ ಸಂದೇಶ ಹಾಕಿಕೊಂಡಿದ್ದರು.

ನಫೀಸಾ ಅವರ ವಾಟ್ಸಾಪ್ ಸ್ಟೇಟಸ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿ, ಶಾಲಾ ಆಡಳಿತದ ಗಮನಕ್ಕೂ ಬಂದಿತ್ತು. ಈ ಬಗ್ಗೆ ಸಭೆ ನಡೆಸಿದ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ.

Related Article

ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಅಫ್ಘಾನಿಸ್ತಾನ; ತಾಲಿಬಾನ್ ನಾಡಿನಲ್ಲಿ ಮಂದಹಾಸ

ಟಿ20 ವಿಶ್ವಕಪ್ ನಲ್ಲಿ ಭಾರತದ ಭವಿಷ್ಯ: ಪ್ರತಿ ಪಂದ್ಯ ಗೆಲ್ಲಲೇಬೇಕಾ?; ಸೋತರೆ ಏನಾಗಲಿದೆ? ಫೈನಲ್ ಗೆ ಹೋಗುತ್ತಾ ಟೀಂ ಇಂಡಿಯಾ?

ಟಿ20 ವಿಶ್ವಕಪ್: ಭಾರತವನ್ನು ಮಣಿಸಿದ ಪಾಕ್, ಪಾಕಿಸ್ತಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮ, ಶುಭ ಕೋರಿದ ಗಣ್ಯರು

ಟಿ20 ವಿಶ್ವಕಪ್: 10 ವಿಕೆಟ್ ಗಳ ಅಂತರದಲ್ಲಿ ಸೋತು ಹೀನಾಯ ದಾಖಲೆ ಬರೆದ ಭಾರತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.