ಟಿ20 ವಿಶ್ವಕಪ್: ಭಾರತವನ್ನು ಮಣಿಸಿದ ಪಾಕ್, ಪಾಕಿಸ್ತಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮ, ಶುಭ ಕೋರಿದ ಗಣ್ಯರು
ದುಬೈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಭಾನುವಾರ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಪಾಕ್ ರಾಜಕೀಯ ಗಣ್ಯರು ಪಾಕ್ ತಂಡಕ್ಕೆ ಶುಭ ಕೋರಿದ್ದಾರೆ.

ಕರಾಚಿ: ದುಬೈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಭಾನುವಾರ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಪಾಕ್ ರಾಜಕೀಯ ಗಣ್ಯರು ಪಾಕ್ ತಂಡಕ್ಕೆ ಶುಭ ಕೋರಿದ್ದಾರೆ.
ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡಿದ್ದ 12 ಪಂದ್ಯಗಳನ್ನು ಸೋತಿತ್ತು. ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಅದರಲ್ಲೂ 10 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಆಮೋಘ ಪ್ರದರ್ಶನ ತೋರಿದ ಪಾಕಿಸ್ತಾನ ಆಟಗಾರರಿಗೆ ಪಾಕಿಸ್ತಾನದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಮುಖವಾಗಿ ತಂಡದ ನಾಯಕ ಬಾಬರ್ ಅಜಂ, ರಿಜ್ವಾನ್ ಮತ್ತು ಬೌಲಿಂಗ್ ನಲ್ಲಿ ಕಮಾಲ್ ಮಾಡಿದ ಶಾಹೀನ್ ಅಫ್ರಿದಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಭಾನುವಾರ ಸಂಜೆ ಪಂದ್ಯ ಆರಂಭವಾಗುವ ವೇಳೆಗೆ ಕರಾಚಿಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ಪಂದ್ಯ ಕೊನೆಯ ಹಂತಕ್ಕೆ ಬಂದಂತೆ ಜನಸಾಗರವೇ ರಸ್ತೆಗಳಿಗೆ ಹರಿದುಬಂತು. ಪಾಕಿಸ್ತಾನದ ಕರಾಚಿಯಲ್ಲಿ ವಾಹನಗಳ ಹಾರ್ನ್‌ಗಳನ್ನು ಜೋರಾಗಿ ಮೊಳಗಿಸುತ್ತ ರಸ್ತೆಗಳಲ್ಲಿ ಸಂಚರಿಸಿದ ಅಭಿಮಾನಿಗಳು, ಕೆಲವೆಡೆ ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮತ್ತೊಂದೆಡೆ ಕ್ಲಬ್ ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಕಾ ಮೌಕಾ ಹಾಡನ್ನು ಹಾಡುವ ಮೂಲಕ ಪಾಕಿಸ್ತಾನ ತಂಡಕ್ಕೆ ಶುಭ ಕೋರಲಾಗಿದೆ.
Ali Zafar Celebrates The Pakistan Victory
Related Article
ಟಿ20 ವಿಶ್ವಕಪ್: 10 ವಿಕೆಟ್ ಗಳ ಅಂತರದಲ್ಲಿ ಸೋತು ಹೀನಾಯ ದಾಖಲೆ ಬರೆದ ಭಾರತ
ದಾಖಲೆ ಬರೆದ ಬಾಬರ್ ಅಜಂ, ರಿಜ್ವಾನ್ ಜೋಡಿ: ಪಾಕ್ ಪರ ವಿಶ್ವ ದಾಖಲೆ ನಿರ್ಮಾಣ
ಪಾಕಿಸ್ತಾನದ ವಿರುದ್ಧ ಭಾರತದ ಸೋಲಿಗೆ ಕಾರಣವಾದ ಟಾಪ್ 6 ಅಂಶಗಳು
ಅಂಪೈರ್ ನಿದ್ದೆ ಮಾಡ್ತಿದ್ದನಾ..?: ಕೆಎಲ್ ರಾಹುಲ್ ನಾಟ್ ಔಟ್ ಎಂದ ಅಭಿಮಾನಿಗಳು. ಕಾರಣ ಏನು ಗೊತ್ತಾ?
ಕಳಚಿತು ಅಜೇಯ ಕೊಂಡಿ: ಪಾಕಿಸ್ತಾನದ ಸರ್ವಾಂಗೀಣ ಹೋರಾಟಕ್ಕೆ ತಲೆಬಾಗಿದ ಭಾರತ, ಪಾಕ್ ಗೆ ಐತಿಹಾಸಿಕ ಜಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


