ಕಳಚಿತು ಅಜೇಯ ಕೊಂಡಿ: ಪಾಕಿಸ್ತಾನದ ಸರ್ವಾಂಗೀಣ ಹೋರಾಟಕ್ಕೆ ತಲೆಬಾಗಿದ ಭಾರತ, ಪಾಕ್ ಗೆ ಐತಿಹಾಸಿಕ ಜಯ
ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಎಂದೇ ಕರೆಯಲಾಗುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನದ ಆಲ್ರೌಂಡ್ ಆಟಕ್ಕೆ ಭಾರತ ಸೋಲೊಪ್ಪಿಕೊಂಡಿದೆ.

ದುಬೈ: ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಹೈವೋಲ್ಟೇಜ್ ಪಂದ್ಯ ಎಂದೇ ಕರೆಯಲಾಗುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನದ ಆಲ್ರೌಂಡ್ ಆಟಕ್ಕೆ ಭಾರತ ಸೋಲೊಪ್ಪಿಕೊಂಡಿದೆ.
ಆ ಮೂಲಕ ಭಾರತದ ಗರಿಮೆಯಲ್ಲಿದ್ದ 'ಅಜೇಯ' ಎಂಬ ಕೊಂಡಿ ಕಳಚಿ ಬಿದ್ದಿದೆ. ನಿನ್ನೆ ದುಬೈ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 12 ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ವಿರಾಟ್ ಕೊಹ್ಸಿ ಏಕಾಂಗಿ ಹೋರಾಟದಿಂದ ಸವಾಲಿನ ರನ್ ಪೇರಿಸಿತು. ನಾಯಕ ವಿರಾಟ್ ಕೊಹ್ಲಿ (57 ರನ್) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪಾಕಿಸ್ತಾನಕ್ಕೆ ಶಾಹೀನ್ ಅಫ್ರಿದಿ 2 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಮರ್ಮಾಘಾತ ನೀಡಿದರು. ಬಳಿಕ ಬ್ಯಾಟಿಂಗ್ ನಲ್ಲಿ ನಾಯಕ ಬಾಬರ್ ಅಜಂ ಮತ್ತು ರಿಜ್ವಾನ್ ಅಜೇಯ ಆಟವಾಡಿ ತಂಡಕ್ಕೆ ಐತಿಹಾಸಿಕ ಜಯ ತಂದು ಕೊಟ್ಟರು.
ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ನಾಯಕ ಬಾಬರ್ ಅಜಂ ಮತ್ತು ಆರಂಭಿಕ ಆಟಗಾರ ರಿಜ್ವಾನ್ ರ ಅಜೇಯ ಆಟದ ನೆರವಿನಿಂದ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತಾದರೂ ದುಬೈಯಲ್ಲಿ ನಡೆದ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮರುಕಳಿಸಲು ವಿರಾಟ್ ಕೊಹ್ಲಿ ಬಳಗಕ್ಕೆ ಸಾಧ್ಯವಾಗಲಿಲ್ಲ.
2007ರಲ್ಲಿ ಆರಂಭವಾದ ಟಿ20 ವಿಶ್ವಕಪ್ ನಲ್ಲಿ ಲೀಗ್ ಹಂತ ಮತ್ತು ಫೈನಲ್ ನಲ್ಲಿ ಪಾಕಿಸ್ತಾನವನ್ನು ಭಾರತ ಮಣಿಸಿತ್ತು. ಬಳಿಕ 2012, 2014, 2016 ಪಾಕಿಸ್ತಾನವನ್ನು ಮಣಿಸಿತ್ತು. ಆದರೆ ಇದೇ ಅಜೇಯ ಓಟ 2021ರಲ್ಲಿ ಸಾಧ್ಯವಾಗಲಿಲ್ಲ. ಭಾರತ ನೀಡಿದ್ದ 152 ರನ್ ಗಳ ಸವಾಲಿನ ಗುರಿಯನ್ನು ಪಾಕಿಸ್ತಾನ ಯಾವುದೇ ಒತ್ತಡಕ್ಕೆ ಒಳಗಾಗದೇ ಯಶಸ್ವಿಯಾಗಿ ತಲುಪಿ ಐತಿಹಾಸಿಕ ಗೆಲುವು ದಾಖಲಿಸಿದೆ.
Related Article
ಪಾಕಿಸ್ತಾನಕ್ಕೆ ಐತಿಹಾಸಿಕ ಜಯ; ವಿಶ್ವಕಪ್ ನಲ್ಲಿ ಮೊದಲ ಗೆಲುವು, 10 ವಿಕೆಟ್ ಗಳಿಂದ ಭಾರತವನ್ನು ಮಣಿಸಿದ ಮೊದಲ ತಂಡ
ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಹೀನಾಯ ಸೋಲು: ಐತಿಹಾಸಿಕ ಗೆಲುವು ಸಾಧಿಸಿದ ಪಾಕ್
T20 WC: ನಾಯಕ ಕೊಹ್ಲಿ ಏಕಾಂಗಿ ಹೋರಾಟ; ಪಾಕ್ ಗೆ 152 ರನ್ ಗಳ ಗುರಿ ನೀಡಿದ ಟೀಂ ಇಂಡಿಯಾ
ಟಿ20 ವಿಶ್ವಕಪ್: ಬಡಿದಾಡಿಕೊಳ್ಳುವ ಮಟ್ಟಕ್ಕೆ ಹೋದ ಲಂಕಾ-ಬಾಂಗ್ಲಾ ಆಟಗಾರರು, ವಿಡಿಯೋ ವೈರಲ್!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


