ಸಲಿಂಗಕಾಮಿ ಮಹಿಳೆಯರ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್: ಬೇಷರತ್ ಕ್ಷಮೆಯಾಚನೆ
ಜಾಹೀರಾತಿನಲ್ಲಿ ಇಬ್ಬರು ಸಲಿಂಗಕಾಮಿ ಮಹಿಳೆಯರು ಕರ್ವಾಚೌತ್ ಹಬ್ಬ ಆಚರಣೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು.

ನವದೆಹಲಿ: ಸ್ವದೇಶಿ ದಿನಬಳಕೆಯ ಉತ್ಪನ್ನ ತಯಾರಕ ಸಂಸ್ಥೆ ಡಾಬರ್ ಉತ್ತರಭಾರತೀಯರ ಕರ್ವಾಚೌತ್ ಹಬ್ಬ ಕುರಿತಾದ ತನ್ನ ವಿವಾದಾತ್ಮಕ ಜಾಹೀರಾತನ್ನು ಹಿಂದಕ್ಕೆ ಪಡೆದುಕೊಂಡಿದೆ. ಅಲ್ಲದೆ ಆ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಬೇಷರತ್ ಕ್ಷಮೆ ಯಾಚಿಸಿದೆ.
ಇದನ್ನೂ ಓದಿ: ತೇಜಸ್ವಿ ಸೂರ್ಯ ಅವರಿಗೆ ಬೆದರಿದ ಫ್ಯಾಬ್ ಇಂಡಿಯಾ: ವಿವಾದಾತ್ಮಕ 'ಜಶ್ನ್ ಇ ರಿವಾಜ್' ಜಾಹಿರಾತು ಹಿಂತೆಗೆತ
ಜಾಹೀರಾತಿನಲ್ಲಿ ಇಬ್ಬರು ಸಲಿಂಗಕಾಮಿ ಮಹಿಳೆಯರು ಕರ್ವಾಚೌತ್ ಹಬ್ಬ ಆಚರಣೆಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು. ಉತ್ತರಭಾರತದಲ್ಲಿ ಕರ್ವಾ ಚೌತ್ ಗೆ ಬಹಳ ಮಹತ್ವದ ಸ್ಥಾನವಿದೆ. ವಿವಾಹಿತ ಮಹಿಳೆ ವೈವಾಹಿಕ ಬಾಂಧವ್ಯ ಹಾಗೂ ಗಂಡನ ಶ್ರೇಯೋಭಿವೃದ್ಧಿಗಾಗಿ ಕರ್ವಾ ಚೌತ್ ಆಚರಣೆ ಮಾಡುತ್ತಾರೆ.
ಪವಿತ್ರ ಹಿನ್ನೆಲೆಯುಳ್ಳ ಈ ಆಚರಣೆಯನ್ನು ಕುರಿತಾದ ಜಾಹೀರಾತಿನಲ್ಲಿ ಇಬ್ಬರು ಮಹಿಳೆಯರು ಸತಿಪತಿಗಳಂತೆ ಆಚರಣೆ ಮಾಡುವುದನ್ನು ಆಡಳಿತಾರೂಢ ಬಿಜೆಪಿ ಪಕ್ಷದ ಹಿರಿಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ವಿರುದ್ಧ ಅನೇಕರು ಟೀಕೆ ಮಾಡಿದ್ದರು. ಇದರಿಂದಾಗಿ ಡಾಬರ್ ಸಂಸ್ಥೆ ಜಾಹೀರಾತನ್ನು ಹಿಂಪಡೆದುಕೊಂಡಿದೆ. ಇತ್ತೀಚಿಗಷ್ಟೆ ಫ್ಯಾಬ್ ಇಂಡಿಯಾ ಜಾಹೀರಾತು ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖಂಡನೆ ವ್ಯಕ್ತಪಡಿಸಿದ್ದರು.
Related Article
ಪಾನ್ ಮಸಾಲಾ ಜಾಹೀರಾತಿನಿಂದ ಹಿಂದೆ ಸರಿದ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
ನೋ ಸ್ಮೋಕಿಂಗ್ ಜಾಹೀರಾತಿನ ಬಾಲನಟಿ ಈಗ 'ಬರ್ಕ್ಲಿ' ಚಿತ್ರದ ನಾಯಕಿ!
ಗಂಗೂಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಅಡುಗೆ ಎಣ್ಣೆ ಜಾಹೀರಾತಿಗೆ ತಾತ್ಕಾಲಿಕ ಬ್ರೇಕ್!
ಜಾಹೀರಾತಿನಲ್ಲಿ ಯಕ್ಷಗಾನ ಕಲೆಗೆ ಅವಮಾನ: ಅಭಿಮಾನಿಗಳು, ಕಲಾವಿದರಿಂದ ಫೆವಿಕಾಲ್ ಕಂಪನಿ ಕ್ಷಮೆಯಾಚನೆಗೆ ಪಟ್ಟು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


