ದೇಶ

ಗುಜರಾತ್: ಗಂಡನ ಮನೆಯಲ್ಲಿ ಶೌಚಾಲಯವಿಲ್ಲವೆಂದು ಡಿವೋರ್ಸ್​ ಪಡೆದ ಪತ್ನಿ!

ಗಂಡ-ಹೆಂಡತಿ ಜಗಳವಾಡಿ, ಹಣಕ್ಕಾಗಿ ಅಥವಾ ಇನ್ನೂ ಇತರೆ ಕಾರಣಗಳಿಗೆ ಡಿವೋರ್ಸ್​ ಪಡೆಯುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದ್ರೆ ಗುಜರಾತ್​​ನ ಗಾಂಧಿನಗರದ ರಂದೇಶನ್​ ಗ್ರಾಮದ ದಂಪತಿ ಶೌಚಾಲಯದ ವಿಚಾರವಾಗಿ...

ಗುಜರಾತ್: ಗಂಡನ ಮನೆಯಲ್ಲಿ ಶೌಚಾಲಯವಿಲ್ಲವೆಂದು ಡಿವೋರ್ಸ್​ ಪಡೆದ ಪತ್ನಿ!
ಸಾಂದರ್ಭಿಕ ಚಿತ್ರ
Published On :

ಗಾಂಧಿನಗರ: ಗಂಡ-ಹೆಂಡತಿ ಜಗಳವಾಡಿ, ಹಣಕ್ಕಾಗಿ ಅಥವಾ ಇನ್ನೂ ಇತರೆ ಕಾರಣಗಳಿಗೆ ಡಿವೋರ್ಸ್​ ಪಡೆಯುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದ್ರೆ ಗುಜರಾತ್​​ನ ಗಾಂಧಿನಗರದ ರಂದೇಶನ್​ ಗ್ರಾಮದ ದಂಪತಿ ಶೌಚಾಲಯದ ವಿಚಾರವಾಗಿ ಡಿವೋರ್ಸ್​ ಪಡೆದಿದ್ದಾರೆ.

ಎಂಟು ವರ್ಷಗಳ ಹಿಂದೆ ಯುವತಿ ರಂದೇಶನ್​​ ಗ್ರಾಮದ ಯುವಕನನ್ನು ಮದುವೆಯಾಗಿದ್ದರು. ಆದ್ರೆ, ಇದೀಗ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಯುವತಿ ವಿಚ್ಛೇದನ ಪಡೆದಿದ್ದಾರೆ. ಯುವತಿ ಹತ್ತನೇ ತರಗತಿವರೆಗೆ ಓದಿದ್ದಾರೆ. ಗಂಡನ ಮನೆಯವರಿಗೆ 6 ಎಕರೆ ಭೂಮಿ ಇದ್ದು, ತಿಂಗಳಿಗೆ 10 ಸಾವಿರ ರೂ. ಆದಾಯ ಬರುತ್ತಿತ್ತು. ಆದ್ರೂ ಕೂಡ ಶೌಚಾಲಯ ಕಟ್ಟಿಸಿರಲಿಲ್ಲ.

ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಯುವತಿ ಎಷ್ಟೇ ಹೇಳಿದ್ರೂ ಶೌಚಾಲಯ ಕಟ್ಟಿಸದ ಹಿನ್ನೆಲೆ ಇದರಿಂದ ಬೇಸತ್ತು ತನ್ನ ತವರು ಮನೆಗೆ ಹೋಗಿದ್ದಾಳೆ. ಮತ್ತೆ ಹೇಗೋ ರಾಜಿ ಮಾಡಿಕೊಂಡು ಪತಿ ಆಕೆಯನ್ನು ಮನೆಗೆ ಕರೆತಂದಿದ್ದ. ಬಳಿಕ ನಿತ್ಯ ಆಕೆಗೆ ಚಿತ್ರಹಿಂಸೆ ನೀಡಲು ಶುರು ಮಾಡಿದ. ಇದರಿಂದ ಮನನೊಂದ ಯುವತಿ ಲಂಘ್ನಾಜ್ ಠಾಣೆಗೆ ದೂರು ನೀಡಿದ್ದರು. ಅಂತಿಮವಾಗಿ ಈಗ ಗಂಡನಿಂದ ವಿಚ್ಛೇದನ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.