ದೇಶ

ಎಸ್ಪಿ ಬಂಡಾಯ ಶಾಸಕನಿಗೆ ಬಿಜೆಪಿ ಬೆಂಬಲ, ಉತ್ತರ ಪ್ರದೇಶ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿ ನಿತಿನ್ ಅಗರ್ವಾಲ್ ಆಯ್ಕೆ

ಪ್ರಸ್ತುತ ಯೋಗಿ ಆದಿತ್ಯ ನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕೇವಲ ಐದು ತಿಂಗಳ ಅಧಿಕಾರಾವಧಿ ಬಾಕಿ ಇದ್ದು, ಸೋಮವಾರ ನಡೆದ ವಿಶೇಷ ಏಕದಿನ ಅಧಿವೇಶನದಲ್ಲಿ 14 ವರ್ಷಗಳ ಅಂತರದ ನಂತರ ಉತ್ತರ ಪ್ರದೇಶ ವಿಧಾನಸಭೆ...

ಎಸ್ಪಿ ಬಂಡಾಯ ಶಾಸಕನಿಗೆ ಬಿಜೆಪಿ ಬೆಂಬಲ, ಉತ್ತರ ಪ್ರದೇಶ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆಗಿ ನಿತಿನ್ ಅಗರ್ವಾಲ್ ಆಯ್ಕೆ
ಉತ್ತರ ಪ್ರದೇಶ ವಿಧಾನಸಭೆ
Published On :

ಲಖನೌ: ಪ್ರಸ್ತುತ ಯೋಗಿ ಆದಿತ್ಯ ನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕೇವಲ ಐದು ತಿಂಗಳ ಅಧಿಕಾರಾವಧಿ ಬಾಕಿ ಇದ್ದು, ಸೋಮವಾರ ನಡೆದ ವಿಶೇಷ ಏಕದಿನ ಅಧಿವೇಶನದಲ್ಲಿ 14 ವರ್ಷಗಳ ಅಂತರದ ನಂತರ ಉತ್ತರ ಪ್ರದೇಶ ವಿಧಾನಸಭೆಯು ತನ್ನ ಉಪ ಸಭಾಪತಿಯನ್ನು ಆಯ್ಕೆ ಮಾಡಿದೆ.

ಸಮಾಜವಾದಿ ಪಕ್ಷದ(ಎಸ್ಪಿ) ಬಂಡಾಯ ಶಾಸಕ ನಿತಿನ್ ಅಗರ್ವಾಲ್ ಅವರು ಆಡಳಿತರೂಢ ಬಿಜೆಪಿ ಬೆಂಬಲದೊಂದಿಗೆ ನೂತನ ಡೆಪ್ಯೂಟಿ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ.

ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 368 ಮತಗಳ ಪೈಕಿ ನಿತಿನ್ ಅಗರ್ವಾಲ್ ಅವರು 304 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. 

ನಿತಿನ್ ಅಗರ್ವಾಲ್ ಅವರು, 2019ರ ಲೋಕಸಭಾ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರಿದ ನರೇಶ್ ಅಗರ್ವಾಲ್ ಅವರ ಪುತ್ರರಾಗಿದ್ದಾರೆ.

ನಿತಿನ್ ವಿರುದ್ಧ ಸೀತಾಪುರ ನರೇಂದ್ರ ಸಿಂಗ್ ವರ್ಮಾ ಅವರನ್ನು ಸಮಾಜವಾದಿ ಪಕ್ಷ ಕಣಕ್ಕಿಳಿಸಿತ್ತು. ವರ್ಮಾ ಅವರು ಕೇವಲ 60 ಮತಗಳನ್ನು ಪಡೆದರೆ ನಾಲ್ಕು ಮತಗಳನ್ನು ಅಸಿಂಧುಗೊಳಿಸಲಾಗಿದೆ.

403 ರ ಸದಸ್ಯ ಬಲ ಹೊಂದಿರುವ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 304 ಶಾಸಕರನ್ನು ಹೊಂದಿದ್ದರೆ, ಸಮಾಜವಾದಿ ಪಕ್ಷ 49. ಕಾಂಗ್ರೆಸ್ ನ  ಏಳು ಶಾಸಕರು ಮತದಾನ ಬಹಿಷ್ಕರಿಸಿದ್ದರು. ಆದಾಗ್ಯೂ, ರಾಯ್ ಬರೇಲಿಯಿಂದ ಒಬ್ಬ ಬಂಡಾಯ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಮತ ಚಲಾಯಿಸಿದರು. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ವಿಧಾನಸಭೆಯಲ್ಲಿ 16 ಶಾಸಕರನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.