ದೇಶ

ಶಾರೂಖ್ ಖಾನ್ ವಾಹನ ಚಾಲಕನ ಹೇಳಿಕೆ ಪಡೆದ ಎನ್ ಸಿಬಿ: ಡ್ರಗ್ ಕೇಸ್ ನಲ್ಲಿ ಮತ್ತೋರ್ವನ ಬಂಧನ 

ನಾರ್ಕೊಟಿಕ್ಸ್ ನಿಯಂತ್ರಣ ಬ್ಯುರೋ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರ ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಶಾರೂಖ್ ಖಾನ್ ವಾಹನ ಚಾಲಕನ ಹೇಳಿಕೆ ಪಡೆದ ಎನ್ ಸಿಬಿ: ಡ್ರಗ್ ಕೇಸ್ ನಲ್ಲಿ ಮತ್ತೋರ್ವನ ಬಂಧನ 
ಎನ್ ಸಿಬಿ
Published On :

ನಾರ್ಕೊಟಿಕ್ಸ್ ನಿಯಂತ್ರಣ ಬ್ಯುರೋ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರ ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದೆ. 

ಮುಂಬೈ ಕೋಸ್ಟ್ ನಲ್ಲಿ ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಗೆ ಸಂಬಂಧಿಸಿದಂತೆ ಎನ್ ಸಿಬಿ ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಶಾರೂಖ್ ಖಾನ್ ಅವರ ಚಾಲಕನ ಹೇಳಿಕೆಯನ್ನು ಪಡೆದುಕೊಂಡಿದೆ. 

ಮುಂಬೈ ನಲ್ಲಿರುವ ಎನ್ ಸಿಬಿ ಕಚೇರಿಗೆ ತೆರಳಿದ ಶಾರೂಖ್ ಚಾಲಕ ಆಂಟಿ ಡ್ರಗ್ಸ್ ಸಂಸ್ಥೆ ಎದುರು ಹೇಳಿಕೆ ನೀಡಿದ್ದಾರೆ. ಬಳಿಕ ಆತನನ್ನು ಬಿಡುಗಡೆ ಮಾಡಿದ್ದಾರೆ. 

ಎನ್ ಸಿಬಿ ಸಿಬ್ಬಂದಿಗಳು ಶನಿವಾರದಂದು ರಾತ್ರಿ ಮುಂಬೈ ನ ಉಪನಗರಗಳಲ್ಲಿ ದಾಳಿ ನಡೆಸಿ ಡ್ರಗ್ಸ್ ವಶಕ್ಕೆ ಪಡೆದು ಶಿವರಾಜ್ ರಾಮ್ ದಾಸ್ ಎಂಬಾತನನ್ನು ಬಂಧಿಸಲಾಗಿತ್ತು. ಡ್ರಗ್ಸ್ ಪ್ರಕರಣದಲ್ಲಿ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರೂ ಸೇರಿ 19 ಮಂದಿಯನ್ನು ಎನ್ ಸಿಬಿ ವಶಕ್ಕೆ ಪಡೆದಿದೆ. 

ಮುಂಬೈ ನ ಕಡಲ ತೀರದಲ್ಲಿ ಕ್ರೂಸ್ ಪಾರ್ಟಿಯ ವೇಳೆ ಕಳೆದ ವಾರ ಎನ್ ಸಿಬಿ ದಾಳಿ ನಡೆಸಿ ಆರ್ಯನ್ ಖಾನ್ ನ್ನು ವಶಕ್ಕೆ ಪಡೆದಿತ್ತು. ಆರ್ಯನ್ ಖಾನ್ ಗೆ ಸದ್ಯ ಜಾಮೀನು ನಿರಾಕರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.