ಡ್ರಗ್ ಪೆಡ್ಲರ್ ಗಳಿಗೆ ಸುಲಭ ತುತ್ತಾಗುತ್ತಿರುವ ಐಟಿ ಉದ್ಯೋಗಿಗಳು: ಕೇರಳ ಪೊಲೀಸರ ಕಾರ್ಯಾಚರಣೆ
ಕೊಚ್ಚಿಯ ತಿರಿಕ್ಕಕರ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ಒಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮೂವರು ಟೆಕ್ಕಿಗಳನ್ನು ಬಂಧಿಸಿದ್ದರು.

ಕೊಚ್ಚಿ: ಕೇರಳದ ಕುಖ್ಯಾತ ಡ್ರಗ್ ಮಾರಾಟ ತಂಡವಾದ 'ತಿರಿಕ್ಕಕರ ಗ್ಯಾಂಗ್' ಸದಸ್ಯರ ಮುಖ್ಯ ಟಾರ್ಗೆಟ್ ಐಟಿ ಉದ್ಯೋಗಿಗಳು ಎನ್ನುವ ಆತಂಕಕಾರಿ ಸಂಗತಿ ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಇದರಿಂದಾಗಿ ಟೆಕ್ಕಿ ಗಳಲ್ಲಿ ಮಾದಕ ವ್ಯಸನ ಹೆಚ್ಚುತ್ತಿರುವ ಕುರುಹು ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಚ್ಚಿಯ ತಿರಿಕ್ಕಕರ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ಒಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮೂವರು ಟೆಕ್ಕಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ಓರ್ವ ಮಹಿಳೆಯೂ ಸೇರಿದ್ದಳು. ಮೂವರೂ ಕೊಚ್ಚಿಯ ದೊಡ್ಡ ಐಟಿ ಸಂಸ್ಥೆಯ ಉದ್ಯೋಗಿಗಳು.
ಬಂಧಿತ ಆರೋಪಿಗಳು ಐಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅವರ ಬಳಿ ಎಂಡಿಎಂಎ, ಎಸ್ ಎಸ್ ಡಿ, ಹಶಿಶ್ ದೊರೆತಿದ್ದವು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರು ಮುಂದಿನ ದಿನಗಳಲ್ಲಿ ಬಂಧಿತ ಆರೋಪಿಗಳಿಂದ ಅವರ ಗ್ರಾಹಕರ ಮಾಹಿತಿ ಪಡೆದು ಅವರಿಗೆ ಸಮನ್ಸ್ ಕಳುಹಿಸುವುದಾಗಿ ತಿಳಿಸಿದ್ದಾರೆ.
Related Article
ಡಿ-ಕಂಪನಿ ಡ್ರಗ್ ಗಳಿಗೆ ಬಾಲಿವುಡ್ ತಾರೆಯರೇ ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರು!
ಬೆಂಗಳೂರು: ರೈಲ್ವೆ ಆವರಣದಲ್ಲಿ 3.2 ಕೋಟಿ ಮೌಲ್ಯದ ಪಾರ್ಟಿ ಡ್ರಗ್ ವಶಪಡಿಸಿಕೊಂಡ ಆರ್‌ಪಿಎಫ್ ಮಹಿಳಾ ತಂಡ
ಬೆಂಗಳೂರು: ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯಾ ನಟನ ಬಂಧನ
ಡ್ರಗ್ಸ್ ಪ್ರಕರಣ: ರೇವಂತ್ ರೆಡ್ಡಿ ವಿರುದ್ಧ ತೆಲಂಗಾಣ ಸಚಿವ ಕೆಟಿಆರ್ ಮಾನನಷ್ಟ ಮೊಕದ್ದಮೆ ದಾಖಲು
ಸಿಸಿಬಿ ಭರ್ಜರಿ ಕಾರ್ಯಾಚರಣೆ: ಕುಖ್ಯಾತ ಡ್ರಗ್ ಪೆಡ್ಲರ್‌ಗಳ ಬಂಧನ; 2 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


