ಪಿಎಂ ಮಿತ್ರಾ ಯೋಜನೆ: 4,445 ಕೋಟಿ ರೂ. ವೆಚ್ಚದ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ
ಜವಳಿ ಕ್ಷೇತ್ರವನ್ನು ಉತ್ತೇಜಿಸುವ ಮತ್ತೊಂದು ಯೋಜನೆಯಲ್ಲಿ, ಕೇಂದ್ರ ಸಚಿವ ಸಂಪುಟ 7 ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪುಗಳ ಒಟ್ಟು 4,445 ಕೋಟಿ ರೂಪಾಯಿ ವೆಚ್ಚದ ಪಿಎಂ ಮಿತ್ರಾ ಟೆಕ್ಸ್ ಟೈಲ್ ಪಾರ್ಕ್ ಯೋಜನೆಗೆ ಅನುಮೋದನೆ ನೀಡಿದೆ.

ನವದೆಹಲಿ: ಜವಳಿ ಕ್ಷೇತ್ರವನ್ನು ಉತ್ತೇಜಿಸುವ ಮತ್ತೊಂದು ಯೋಜನೆಯಲ್ಲಿ, ಕೇಂದ್ರ ಸಚಿವ ಸಂಪುಟ 7 ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪುಗಳ ಒಟ್ಟು 4,445 ಕೋಟಿ ರೂಪಾಯಿ ವೆಚ್ಚದ ಪಿಎಂ ಮಿತ್ರಾ ಟೆಕ್ಸ್ ಟೈಲ್ ಪಾರ್ಕ್ ಯೋಜನೆಗೆ ಅನುಮೋದನೆ ನೀಡಿದೆ.
ಪ್ರಸ್ತಾವಿತ ಮೆಗಾ ಪಾರ್ಕ್‌ಗಳನ್ನು ವಿವಿಧ ರಾಜ್ಯಗಳಲ್ಲಿರುವ ಗ್ರೀನ್‌ಫೀಲ್ಡ್ ಮತ್ತು ಬ್ರೌನ್ ಫೀಲ್ಡ್ ತಾಣಗಳಲ್ಲಿ ಸ್ಥಾಪಿಸಲಾಗುವುದು. ಕರ್ನಾಟಕ, ತಮಿಳುನಾಡು, ಪಂಜಾಬ್, ಒಡಿಶಾ, ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಅಸ್ಸಾಂ, ಮಧ್ಯಪ್ರದೇಶ ಮತ್ತು ತೆಲಂಗಾಣದಂತಹ ಹಲವು ರಾಜ್ಯಗಳು ಈ ಯೋಜನೆಗೆ ಆಸಕ್ತಿ ವ್ಯಕ್ತಪಡಿಸಿವೆ. ವಸ್ತುನಿಷ್ಠ ಮಾನದಂಡಗಳ ಆಧಾರದಲ್ಲಿ ಸ್ಥಳದ ಆಯ್ಕೆ ನಡೆಯಲಿದೆ.
ಕ್ಯಾಬಿನೆಟ್ ನಿರ್ಧಾರದ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದು, ಪಿಎಂ ಮಿತ್ರಾ ಒಂದೇ ಸ್ಥಳದಲ್ಲಿ ಜವಳಿ ತಯಾರಿಕೆ, ನೇಯ್ಗೆ, ಸಂಸ್ಕರಣೆ, ಡೈಯಿಂಗ್ ಮತ್ತು ಮುದ್ರಣದಿಂದ ಒಂದು ಜವಳಿ ಮೌಲ್ಯ ಸರಪಳಿಯನ್ನು ರಚಿಸಲು ಒಂದು ಅವಕಾಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತಾವಿತ ಯೋಜನೆಯು ಪ್ರತಿ ಉದ್ಯಾನವನಕ್ಕೆ 1 ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಜವಳಿ ಕ್ಷೇತ್ರವನ್ನು ಬೆಂಬಲಿಸಲು ಸರ್ಕಾರವು ಈಗಾಗಲೇ ಆರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಪಿಎಂ ಮಿತ್ರಾ ಏಳನೆಯದು, ಇದು ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಜನಸಂಖ್ಯೆ, ವೈವಿಧ್ಯಮಯ ಸ್ಥಳಾಕೃತಿ ಸವಾಲುಗಳಾಗಿವೆ: ಪ್ರಧಾನಿ ಮೋದಿ
ಹಲವಾರು ರಾಜ್ಯಗಳಲ್ಲಿ ಸ್ಥಾಪನೆಯಾಗಲಿರುವ ರಫ್ತು ಮತ್ತು ಉದ್ಯೋಗವನ್ನು ಹೆಚ್ಚಿಸಲು ಮೋದಿ ಸರ್ಕಾರದ ಬೃಹತ್ ಸ್ಥಾವರಗಳ ಒಂದು ನೋಟವನ್ನು ಹಂಚಿಕೊಂಡ ಕೇಂದ್ರ ಕ್ಯಾಬಿನೆಟ್, ವಿವಿಧ ರಾಜ್ಯಗಳಲ್ಲಿ (ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ) ಗ್ರೀನ್ ಫೀಲ್ಡ್ ಅಥವಾ ಬ್ರೌನ್ ಫೀಲ್ಡ್ ತಾಣಗಳಲ್ಲಿ ಇಂಟಿಗ್ರೇಟೆಡ್ ಪಾರ್ಕ್ ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ. ಗ್ರೀನ್‌ಫೀಲ್ಡ್ ಸೈಟ್‌ಗಳಲ್ಲಿ ಪಿಎಂ-ಮಿತ್ರ ಸಾಮಾನ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಕೇಂದ್ರ ಸರ್ಕಾರವು ರೂ. 500 ಕೋಟಿಗಳಷ್ಟು ಬಂಡವಾಳದ ಸಹಾಯವನ್ನು ಅಥವಾ ಯೋಜನಾ ವೆಚ್ಚದ ಶೇಕಡಾ 30 ರಷ್ಟನ್ನು ನೀಡುತ್ತದೆ.
ಬ್ರೌನ್‌ಫೀಲ್ಡ್ ಸೈಟ್‌ಗಳಿಗೆ ಬೆಂಬಲ ಮೊತ್ತವು ವೆಚ್ಚದ 30 ಪ್ರತಿಶತ ಮತ್ತು ಮೌಲ್ಯಮಾಪನದ ನಂತರ ರೂ 200 ಕೋಟಿಗೆ ಸೀಮಿತವಾಗಿದೆ. ಈ ಯೋಜನೆಯನ್ನು ಖಾಸಗಿ ವಲಯಕ್ಕೆ ಆಕರ್ಷಕವಾಗಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ, ಜವಳಿ ಉತ್ಪಾದನಾ ಘಟಕಗಳ ಆರಂಭಿಕ ಸ್ಥಾಪನೆಗೆ ಸರ್ಕಾರ ಪ್ರತಿ ಉದ್ಯಾನವನಕ್ಕೆ 300 ಕೋಟಿ ರೂ. ಅಥವಾ ಪಿಎಂ-ಮಿತ್ರದಲ್ಲಿ ಹೊಸದಾಗಿ ಸ್ಥಾಪಿಸಲಾದ ಘಟಕದ ವಹಿವಾಟಿನ ಶೇ.3ರ ವರೆಗೆ ಇದನ್ನು ಪಾವತಿಸಲಾಗುವುದು ಎನ್ನಲಾಗಿದೆ.
ಬಜೆಟ್ 2021 ರಲ್ಲಿ ಘೋಷಿಸಲಾದ ಬೃಹತ್ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳು ಸಾರಿಗೆ ಸೌಲಭ್ಯವನ್ನು ಕಡಿಮೆ ಮಾಡಲು ಏಕೀಕೃತ ಸೌಲಭ್ಯಗಳನ್ನು ಮತ್ತು ತ್ವರಿತ ತಿರುವು ಸಮಯವನ್ನು ಹೊಂದಿರುತ್ತದೆ. ಭಾರತವು ಜವಳಿ ಕ್ಷೇತ್ರದ ಸಂಪೂರ್ಣ ಸಮಗ್ರ ಜಾಗತಿಕ ಸ್ಪರ್ಧಾತ್ಮಕ ಉತ್ಪಾದನೆ ಮತ್ತು ದೇಶವು ರಫ್ತು ಕೇಂದ್ರವಾಗಿ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು.
ಕೇವಲ ಉತ್ಪಾದನೆ ಅಷ್ಟೇ ಅಲ್ಲದೆ ಇವುಗಳು ವಿನ್ಯಾಸ ಕೇಂದ್ರಗಳು ಮತ್ತು ಪರೀಕ್ಷಾ ಕೇಂದ್ರಗಳನ್ನು ಸಹ ಹೊಂದಿರುತ್ತವೆ. ಇವುಗಳಲ್ಲಿ ಕಾರ್ಮಿಕರ ಆಸ್ಪತ್ರೆಗಳು ಮತ್ತು ವಸತಿ, ಲಾಜಿಸ್ಟಿಕ್ಸ್ ಪಾರ್ಕ್, ಗೋದಾಮು, ವೈದ್ಯಕೀಯ, ತರಬೇತಿ ಮತ್ತು ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ ಸೌಲಭ್ಯಗಳು ಕೂಡ ಇರುತ್ತವೆ. ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಜವಳಿ ಪಾರ್ಕ್ ನಿವ್ವಳ ಉತ್ಪಾದನಾ ಚಟುವಟಿಕೆಗಾಗಿ ಶೇ .50 ಪ್ರದೇಶ, ಉಪಯುಕ್ತತೆಗಳಿಗೆ ಶೇ .20 ಪ್ರದೇಶ ಮತ್ತು ವಾಣಿಜ್ಯ ಅಭಿವೃದ್ಧಿಗೆ ಶೇ .10 ಪ್ರದೇಶವನ್ನು ಅಭಿವೃದ್ಧಿಪಡಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


