ಕೇರಳ: ರೈಲಿಗೆ ಸಿಕ್ಕಿ ಆನೆಗಳು ಸಾಯುವುದನ್ನು ತಡೆಗಟ್ಟಲು ಹಳಿಗೆ ಬೇಲಿ ಹಾಕಲು ಅರಣ್ಯಾಧಿಕಾರಿಗಳು ಮುಂದು
ಸುಮಾರು 25 ಕಿ.ಮೀ ಉದ್ದದ ರೈಲು ಮಾರ್ಗದಲ್ಲಿ ಬೇಲಿ ಹಾಕಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೊಯಮತ್ತೂರು: ರೈಲಿಗೆ ಸಿಕ್ಕಿ ಆನೆಗಳು ಮೃತಪಡುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ- ತಮಿಳುನಾಡು ಅರಣ್ಯಾಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಪರಿಹಾರ ಕಂಡುಕೊಂಡಿದ್ದಾರೆ. ಕಾಂಜಿಕ್ಕೋಡ್ ಮತ್ತು ಮದುಕ್ಕರೈ ರೈಲುಮಾರ್ಗದಲ್ಲಿ ಆನೆಗಳು ರೈಲ್ವೇ ಹಳಿ ಕ್ರಾಸ್ ಮಾಡದಂತೆ ಬೇಲಿಯನ್ನು ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ರೈಲ್ವೇ ಹಳಿಗಳಿಗೆ ಬೇಲಿ ಹಾಕುವುದರಿಂದ ಆನೆಗಳನ್ನು ರೈಲ್ವೇ ಹಳಿಯಿಂದ ದೂರವಿಡಬಹುದು ಎನ್ನುವುದು ಕರ್ನಾಟಕದ ನಾಗರಹೊಳೆಯಲ್ಲಿನ ರೈಲು ಬೇಲಿಯನ್ನು ಕೇರಳ ಅರಣ್ಯಾಧಿಕಾರಿಗಳು ಉದಾಹರಿಸಿದ್ದಾರೆ.
ಸುಮಾರು 25 ಕಿ.ಮೀ ಉದ್ದದ ರೈಲು ಮಾರ್ಗದಲ್ಲಿ ಬೇಲಿ ಹಾಕಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಈ ಮಾರ್ಗದಲ್ಲಿ ರಾತ್ರಿಯ ರೈಲುಪ್ರಯಾಣವನ್ನು ನಿರ್ಬಂಧಿಸುವುದೇ ಪರಿಹಾರ ಎನ್ನುವುದನ್ನು ಪರಿಸರಪ್ರೇಮಿಗಳು ಪುನರುಚ್ಛರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


