ದೇಶ

ಪುತ್ರಿಯ ಖಾಸಗಿ ಫೋಟೊ ತೋರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್: ಸಾಲ ವಸೂಲಿಗೆ ವಿಕ್ಷಿಪ್ತ ಮಾರ್ಗ

2020ರಲ್ಲಿ ಗೋಮತಿ ಕುಟುಂಬದವರಿಗೆ ರಮೇಶ್ ಮನೆ ಖರೀದಿಗೆಂದು 50 ಲಕ್ಷ ರೂ.ಗಳ ಸಾಲ ನೀಡಿದ್ದರು. ಸಾಲ ಮರಳಿಸುವಂತೆ ಎಷ್ಟು ಕೇಳಿಕೊಂಡಿದ್ದರೂ ಗೋಮತಿ ಎಂಬುವವರು ಸಾಲ ಮರಳಿಸಿರಲಿಲ್ಲ.

ಪುತ್ರಿಯ ಖಾಸಗಿ ಫೋಟೊ ತೋರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್: ಸಾಲ ವಸೂಲಿಗೆ ವಿಕ್ಷಿಪ್ತ ಮಾರ್ಗ
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ಸಾಲ ಮರಳಿಸದಿದ್ದರೆ ಪುತ್ರಿಯ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸುವುದಾಗಿ ಮಹಿಳೆಗೆ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ವಿ. ರಮೇಶ್ ಎಂಬುವವರು ಬಂಧಿತ ವ್ಯಕ್ತಿ. ತಮಿಳುನಾಡು ಮೂಲದ ಅವರು ಅಮೆರಿಕದಲ್ಲಿ ಹಲವು ದಶಕಗಳಂದ ನೆಲೆಸಿದ್ದರು. 2020ರಲ್ಲಿ ಗೋಮತಿ ಕುಟುಂಬದವರಿಗೆ ರಮೇಶ್ ಮನೆ ಖರೀದಿಗೆಂದು 50 ಲಕ್ಷ ರೂ.ಗಳ ಸಾಲ ನೀಡಿದ್ದರು.

ಸಾಲ ಮರಳಿಸುವಂತೆ ಎಷ್ಟು ಕೇಳಿಕೊಂಡಿದ್ದರೂ ಗೋಮತಿ ಎಂಬುವವರು ಸಾಲ ಮರಳಿಸಿರಲಿಲ್ಲ. ಹೀಗಾಗಿ ಅವರು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. 

ನವೆಂಬರ್ 6ರಂದು ಆರೋಪಿ ರಮೇಶ್ ಒಂದು ತಿಂಗಳ ಕಾಲ ಭಾರತಕ್ಕೆ ಬಂದಿದ್ದರು. ಈ ಸಂದರ್ಭ ಅವರು ಗೋಮತಿ ಅವರ ಮನೆಗೆ ತೆರಳಿ ಅಮೆರಿಕದಲ್ಲಿ ನೆಲೆಸಿದ್ದ ಅವರ ಪುತ್ರಿಯ ಖಾಸಗಿ ಫೋಟೊಗಳನ್ನು ತೋರಿಸಿ ಬೆದರಿಕೆ ಒಡ್ಡಿದ್ದಾಗಿ ಗೋಮತಿ ದೂರಿನಲ್ಲಿ ತಿಳಿಸಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ್ದ ಗೋಮತಿ ಅವರ ಪುತ್ರಿಗೆ ವಿವಾಹ ನಿಶ್ಚಯವಾಗಿದ್ದು, ಸಾಲ ಮರಳಿಸದಿದ್ದರೆ ಖಾಸಗಿ ಫೋಟೊಗಳನ್ನು ವರನ ಮನೆಯವರಿಗೆ ನೀಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾಗಿ ತಿಳಿದುಬಂದಿದೆ. ಆರೋಪಿ ಸದ್ಯ ಪೊಲೀಸರ ವಶದಲ್ಲಿದ್ದಾನೆ.

Related Article

ಇದು ಸರ್ಕಸ್ ಅಥವಾ ಸಿನಿಮಾ ಅಲ್ಲ: ಅರೆನಗ್ನನಾಗಿ ಆನ್ ಲೈನ್ ವಿಚಾರಣೆಗೆ ಹಾಜರಾದ ವ್ಯಕ್ತಿ ವಿರುದ್ಧ ಕೇರಳ ಹೈಕೋರ್ಟ್ ಕೆಂಡಾಮಂಡಲ

ವಿವಾಹೇತರ ಸಂಬಂಧ: ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ವಿಕೃತಿ ಮೆರೆದ ಗ್ರಾಮಸ್ಥರು

ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ: 3 ಆರೋಪಿಗಳ ಬಂಧನ

ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಆರೋಪ: ನಾಲ್ವರು ಶಂಕಿತರ ಬಂಧನ

ರೂಪದರ್ಶಿಯನ್ನು ನಗ್ನಗೊಳಿಸಿ ಕತ್ತು ಸೀಳಿ ಕ್ರೂರ ಹತ್ಯೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.