ದೇಶ

ಚಂದ್ರಬಾಬು ನಾಯ್ಡು ಮತ್ತೆ ಸಿಎಂ ಆಗುವವರೆಗೂ ಅರ್ಧ ತಲೆ ಕೂದಲು, ಅರ್ಧ ಮೀಸೆ ಬೋಳಿಸಲು ಟಿಡಿಪಿ ಮುಖಂಡ ಪ್ರತಿಜ್ಞೆ

ನೆಲ್ಲೂರು ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಟಿಡಿಪಿ ಮುಖಂಡರೊಬ್ಬರು ಶುಕ್ರವಾರ ಅರ್ಧ ತಲೆ ಕೂದಲು ಹಾಗೂ ಅರ್ಧ ಮೀಸೆಯನ್ನು ಬೋಳಿಸಿಕೊಂಡಿದ್ದಾರೆ.

ಚಂದ್ರಬಾಬು ನಾಯ್ಡು ಮತ್ತೆ ಸಿಎಂ ಆಗುವವರೆಗೂ ಅರ್ಧ ತಲೆ ಕೂದಲು, ಅರ್ಧ ಮೀಸೆ ಬೋಳಿಸಲು ಟಿಡಿಪಿ ಮುಖಂಡ ಪ್ರತಿಜ್ಞೆ
ಕಪ್ಪೆರ ಶ್ರೀನಿವಾಸಲು
Published On :

ನೆಲ್ಲೂರು: ನೆಲ್ಲೂರು ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಟಿಡಿಪಿ ಮುಖಂಡರೊಬ್ಬರು ಶುಕ್ರವಾರ ಅರ್ಧ ತಲೆ ಕೂದಲು ಹಾಗೂ ಅರ್ಧ ಮೀಸೆಯನ್ನು ಬೋಳಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ಇದೇ ರೀತಿಯಲ್ಲಿ ಇರುವುದಾಗಿ ಟಿಡಿಪಿ ಮುಖಂಡ ಕಪ್ಪೆರ ಶ್ರೀನಿವಾಸಲು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಕೆಳಗಿಳಿಸಿ, ಚಂದ್ರಬಾಬು ನಾಯ್ಡು ಅವರನ್ನು ಮತ್ತೆ ಚುನಾಯಿಸಬೇಕೆಂದು ಸ್ಟೇಟ್ ಹಿಡಿದು ಜನರನ್ನು ಒತ್ತಾಯಿಸುತ್ತಿದ್ದಾರೆ.

ತಾನೂ ಚುನಾವಣೆಯಲ್ಲಿ ಸೋಲಲು ಆಡಳಿತಾರೂಢ ವೈಎಸ್ ಆರ್ ಪಿ ಕೈವಾಡವಿದೆ. ಸಚಿವ ಅನಿಲ್ ಕುಮಾರ್ ಮತ್ತಿತರ ಅವರ ಬೆಂಬಲಿಗರು ನೆಲ್ಲೂರಿನಲ್ಲಿ ಹಣ ಕೊಟ್ಟು ವೋಟುಗಳನ್ನು ಖರೀದಿಸಿದ್ದಾರೆ ಎಂದು ಶ್ರೀನಿವಾಸಲು ಆರೋಪಿಸಿದ್ದಾರೆ. ಟಿಡಿಪಿ ಮುಖಂಡನ ವಿಲಕ್ಷಣ ಪ್ರತಿಭಟನೆ ನೆಲ್ಲೂರಿನಲ್ಲಿ ಸಾಕಷ್ಟು ಸುದ್ದಿಯಾಗಿದೆ. 

ವಿಧಾನಸಭಾ ಅಧಿವೇಶನವನ್ನು ಬಹಿಷ್ಕರಿಸುವುದಾಗಿ ಚಂದ್ರಬಾಬು ನಾಯ್ಡು ಹೇಳಿಕೆ ನಂತರ ಶ್ರೀನಿವಾಸಲು ಈ ರೀತಿಯ ಪ್ರತಿಭಟನೆ ಮಾಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.