ಸಗಣಿ ತಿಂದ ವೈದ್ಯ! ಅದಕ್ಕೆ ಅವರು ಕೊಟ್ಟ ಉತ್ತರ ದಂಗಾಗಿಸಿದೆ; ವಿಡಿಯೋ ನೋಡಿ!
ಯಾರಾದರೂ ನಿಮಗೆ ಹಸುವಿನ ಸಗಣಿ ತಿಂದಿದ್ದೀರಾ? ಎಂದು ಕೇಳಿದರೆ ನೀವು ಬಹುಶಃ ಅವರ ಮೇಲೆ ಕೋಪಗೊಳ್ಳಬಹುದು. ಆದರೆ ವೈದ್ಯರು ಹಸುವಿನ ಸಗಣಿ ತಿನ್ನಲು ಸಲಹೆ ನೀಡುತ್ತಾರೆ. ಸಲಹೆಯನ್ನು ಬಿಡಿ. ಹಸುವಿನ ಸಗಣಿ ತಿಂದು ತೋರಿಸಿದ್ದಾರೆ.

ಕರ್ನಾಲ್ (ಹರಿಯಾಣ): ಯಾರಾದರೂ ನಿಮಗೆ ಹಸುವಿನ ಸಗಣಿ ತಿಂದಿದ್ದೀರಾ? ಎಂದು ಕೇಳಿದರೆ ನೀವು ಬಹುಶಃ ಅವರ ಮೇಲೆ ಕೋಪಗೊಳ್ಳಬಹುದು. ಆದರೆ ವೈದ್ಯರು ಹಸುವಿನ ಸಗಣಿ ತಿನ್ನಲು ಸಲಹೆ ನೀಡುತ್ತಾರೆ. ಸಲಹೆಯನ್ನು ಬಿಡಿ. ಹಸುವಿನ ಸಗಣಿ ತಿಂದು ತೋರಿಸಿದ್ದಾರೆ.
ಹಸುವಿನ ಸಗಣಿಯು ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ದೀಕರಿಸುತ್ತದೆ ಎಂದು ಹರಿಯಾಣದ ಕರ್ನಾಲ್ ಮೂಲದ ವೈದ್ಯ ಡಾ. ಮನೋಜ್ ಮಿತ್ತಲ್ ಸಗಣಿ ತಿಂದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೋಜ್ ಮಿತ್ತಲ್ ಅವರು ಕೊಟ್ಟಿಗೆಯಲ್ಲಿ ನಿಂತು ಸಗಣಿ ಮತ್ತು ಗಂಜಲದ ಪ್ರಯೋಜನದ ಬಗ್ಗೆ ಮಾತನಾಡುತ್ತಾ, ಸಗಣಿಯನ್ನು ತಿಂದಿದ್ದಾರೆ. ನನ್ನ ತಾಯಿ ಸಗಣಿ ತಿನ್ನುವ ಮೂಲಕ ಉಪವಾಸ ಅಂತ್ಯಗೊಳಿಸುತ್ತಿದ್ದರು. ಸಾಮಾನ್ಯ ಹೆರಿಗೆಗಾಗಿ ಮಹಿಳೆಯರು ಸಗಣಿ ತಿನ್ನಬೇಕು. ಅದನ್ನು ತಿಂದರೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯವೇ ಇಲ್ಲ. ಹಸುವಿನ ಗಂಜಲದಲ್ಲಿ ಚಿನ್ನದ ಅಂಶವಿದೆ ಎಂದಿದ್ದಾರೆ.
ವರ್ಷಗಳ ಕಾಲ ಗೋಮೂತ್ರವನ್ನು ಕುಡಿಯಿರಿ - ಸಗಣಿ ತಿನ್ನಿರಿ
ಮಾಧ್ಯಮ ವರದಿಗಳ ಪ್ರಕಾರ, ಎಂಬಿಬಿಎಸ್ ವೈದ್ಯ ಮನೋಜ್ ಮಿತ್ತಲ್ ಅವರು ಕಳೆದ ಹಲವಾರು ವರ್ಷಗಳಿಂದ ಗೋಮೂತ್ರವನ್ನು ಕುಡಿಯುತ್ತಿದ್ದಾರೆ ಮತ್ತು ಗೋವಿನ ಸಗಣಿ ತಿನ್ನುತ್ತಿದ್ದಾರೆ ಎಂದು ಹೇಳಿದ್ದಾರೆ. ಹಸುವಿನ ಸಗಣಿ ತಿನ್ನುವುದಕ್ಕೆ ಅವರು ಅನೇಕ ವಾದಗಳನ್ನು ನೀಡಿದರು. ಹಸುವಿನ ಸಗಣಿಯಲ್ಲಿ ವಿಟಮಿನ್ ಬಿ12 ಇದೆ ಎಂದು ಹೇಳಿದರು. ಇದು ವಿಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ. ದಿನನಿತ್ಯದ ಕೆಲಸದಲ್ಲಿ ಬಳಸುವ ಮೊಬೈಲ್, ರೆಫ್ರಿಜರೇಟರ್, ಎಸಿ ಹೀಗೆ ಹಲವು ವಸ್ತುಗಳು ವಿಕಿರಣಕ್ಕೆ ತುತ್ತಾಗುತ್ತವೆ. ವಿಕಿರಣವು ಕ್ಯಾನ್ಸರ್ ಅಪಾಯವನ್ನು ಸಹ ಉಂಟುಮಾಡುತ್ತದೆ. ಹಸುವಿನ ಸಗಣಿ ತಿನ್ನುವುದರಿಂದ ಈ ಅಪಾಯ ಕಡಿಮೆಯಾಗುತ್ತದೆ. ವೈದ್ಯ ಮಿತ್ತಲ್ ವರ್ಷಗಳ ಕಾಲ ನೆಲದ ಮೇಲೆ ಮಲಗುತ್ತಾರೆ. ಫ್ಯಾನ್ ಅಥವಾ ಎಸಿ ಬಳಸಿಲ್ಲ. ಹಸುವಿನ ಸಗಣಿಯಲ್ಲಿ ಶೇಕಡಾ 28 ರಷ್ಟು ಆಮ್ಲಜನಕವಿದ್ದು ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


