ಜೈ ಭೀಮ್: ನಟ ಸೂರ್ಯಗೆ ಒದ್ದವರಿಗೆ ನಗದು ಬಹುಮಾನ ಘೋಷಿಸಿದ್ದ ಪಿಎಂಕೆ ನಾಯಕನ ವಿರುದ್ಧ ಕೇಸ್ ದಾಖಲು
ತಮಿಳು ನಟ ಸೂರ್ಯ ಅವರ ಇತ್ತೀಚಿನ ಚಿತ್ರ 'ಜೈ ಭೀಮ್' ಯಶಸ್ವಿಯಾದ ಬೆನ್ನಲ್ಲೇ ರಾಜಕೀಯ ಪಕ್ಷವೊಂದರಿಂದ ಟೀಕೆಗೆ ಗುರಿಯಾಗಿದೆ. ನಟ ಸೂರ್ಯ ಅವರಿಗೆ ಒದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ...

ಚೆನ್ನೈ: ತಮಿಳು ನಟ ಸೂರ್ಯ ಅವರ ಇತ್ತೀಚಿನ ಚಿತ್ರ 'ಜೈ ಭೀಮ್' ಯಶಸ್ವಿಯಾದ ಬೆನ್ನಲ್ಲೇ ರಾಜಕೀಯ ಪಕ್ಷವೊಂದರಿಂದ ಟೀಕೆಗೆ ಗುರಿಯಾಗಿದೆ. ನಟ ಸೂರ್ಯ ಅವರಿಗೆ ಒದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಪಾಟಾಲಿ ಮಕ್ಕಳ್ ಕಚ್ಚಿ(ಪಿಎಂಕೆ) ನಾಯಕನ ವಿರುದ್ಧ ಮೈಲಾಡುತುರೈ ಪೊಲೀಸರು ಬುಧವಾರ ಕೇಸ್ ದಾಖಲಿಸಿದ್ದಾರೆ.
ಸ್ಥಳೀಯ ಪಿಎಂಕೆ ನಾಯಕ ಎ ಪಳನಿಸಾಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ) ಜಾಮೀನು ರಹಿತ ಸೆಕ್ಷನ್ಗಳು ಸೇರಿದಂತೆ ಐದು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೈ ಭೀಮ್ ಚಿತ್ರದಲ್ಲಿ ವನ್ನಿಯಾರ ಪಾತ್ರಕ್ಕೆ ಅಪವಾದವೆಂಬಂತೆ ಪಿಎಂಕೆ ಕಾರ್ಯಕರ್ತರು ಇತ್ತೀಚೆಗಷ್ಟೇ ಸೂರ್ಯ ಅಭಿನಯದ ಚಿತ್ರವೊಂದರ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದರು. ಚಿತ್ರದಲ್ಲಿ ಪಕ್ಷದ ಮಾನಹಾನಿ ಮಾಡುವ ಪ್ರಯತ್ನ ನಡೆದಿದೆ ಎಂದು ಪಿಎಂಕೆ ನಾಯಕರು ಆರೋಪಿಸಿದ್ದಾರೆ.
ಏತನ್ಮಧ್ಯೆ, ಪಳನಿಸಾಮಿ ಅವರು ಮೈಲಾಡುತುರೈಗೆ ಬಂದಾಗ ಸೂರ್ಯ ಅವರನ್ನು ಒದೆಯುವವರಿಗೆ ನಗದು ಬಹುಮಾನವನ್ನು ಘೋಷಿಸಿದ್ದರು.
ಸೂರ್ಯ ಅಭಿನಯದ ಜೈ ಭೀಮ್ ಚಿತ್ರವನ್ನು ಟಿ.ಜೆ. ಜ್ಞಾನವೇಲ್ ಮತ್ತು ಸ್ವತಃ ನಟ ಮತ್ತು ಅವರ ಪತ್ನಿ ಜ್ಯೋತಿಕಾ ನಿರ್ಮಿಸಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋ OTT ಪ್ಲಾಟ್ಫಾರ್ಮ್ನಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


