ಸೌರಭ್ ಕೃಪಾಲ್: ಹೈಕೋರ್ಟ್ ಗೆ ಮೊದಲ ಸಲಿಂಗಿ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಸಾಧ್ಯತೆ
ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಸೌರಭ್ ಕೃಪಾಲ್ ದೇಶದ ಹೈಕೋರ್ಟ್ ಗೆ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲ ಸಲಿಂಗಿಯಾಗುವ ಸಾಧ್ಯತೆ ಇದೆ.

ನವದೆಹಲಿ: ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಸೌರಭ್ ಕೃಪಾಲ್ ದೇಶದ ಹೈಕೋರ್ಟ್ ಗೆ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲ ಸಲಿಂಗಿಯಾಗುವ ಸಾಧ್ಯತೆ ಇದೆ.
ದೆಹಲಿ ಹೈಕೋರ್ಟ್ ಗೆ ಸೌರಭ್ ಕೃಪಾಲ್ ಅವರನ್ನು ನ್ಯಾಯಾಧೀಶರಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಶಿಫಾರಸ್ಸು ಮಾಡಿದ್ದು, ಈ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅಂಗೀಕರಿಸಬೇಕಿದೆ.
ಸೌರಭ್ ಕೃಪಾಲ್ ಅವರ ಲೈಂಗಿಕ ದೃಷ್ಟಿಕೋನದ ಕಾರಣದಿಂದ ಅವರ ನೇಮಕಾತಿ ವಿವಾದದ ವಿಷಯವಾಗುವ ಸಾಧ್ಯತೆ ಇದೆ. ಆದರೆ ಅವರ ನೇಮಕಾತಿಯ ವಿಷಯ ಕೇಂದ್ರದ ಅನುಮೋದನೆಯ ಮೇಲೆ ಆಧರಿತವಾಗಿದೆ.
ಸಲಿಂಗ ಕಾಮಿಗಳ ಲೈಂಗಿಕ ಆಸಕ್ತಿಗಳನ್ನು ಅಪರಾಧದ ಪರಿಧಿಯಿಂದ ಹೊರಗಿಡುವುದಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಸಲಿಂಗಿಗಳ ಹಿತಾಸಕ್ತಿಯ ಪರವಾಗಿ ಪ್ರತಿನಿಧಿಸಿದ್ದ ವಕೀಲರೂ ಆಗಿದ್ದಾರೆ ಕೃಪಾಲ್.
ದೆಹಲಿ ಹೈಕೋರ್ಟ್ ನಲ್ಲಿ ಎಲ್ಲಾ 31 ನ್ಯಾಯಾಧೀಶರ ಮತಗಳನ್ನು ಪಡೆದು ಮಾರ್ಚ್ ತಿಂಗಳಲ್ಲಿ ಹಿರಿಯ ಅಡ್ವೊಕೇಟ್ ಪದವಿಯನ್ನು ಪಡೆದಿದ್ದರು. ಸೌರಭ್ ಕೃಪಾಲ್ 2002 ರಲ್ಲಿ ಭಾರತದ ಸಿಜೆಐ ಆಗಿದ್ದ ಭೂಪೇಂದ್ರ ನಾಥ್ ಕೃಪಾಲ್ ಅವರ ಪುತ್ರರಾಗಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಕಾನೂನು ಅಭ್ಯಾಸದಲ್ಲಿ ತೊಡಗಿರುವ ಸೌರಭ್ ಕೃಪಾಲ್ ಆಕ್ಸ್ಫರ್ಡ್, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಿಂದ ಕಾನೂನು ಪದವಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


