ದೇಶ

ಕೇರಳದ ಕಣ್ಣೂರಿನಲ್ಲಿ 100 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆ: ನಾಲ್ವರ ಬಂಧನ

ಕೇರಳ ಪೊಲೀಸರು ಸೋಮವಾರ 100 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆಯನ್ನು ಬಯಲಿಗೆಳೆದಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಕೇರಳದ ಕಣ್ಣೂರಿನಲ್ಲಿ 100 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆ: ನಾಲ್ವರ ಬಂಧನ
ಕ್ರಿಪ್ಟೋ ಕರೆನ್ಸಿ
Published On :

ಕಣ್ಣೂರು: ಕೇರಳ ಪೊಲೀಸರು ಸೋಮವಾರ 100 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆಯನ್ನು ಬಯಲಿಗೆಳೆದಿದ್ದು, ನಾಲ್ವರನ್ನು ಬಂಧಿಸಿದ್ದಾರೆ. 

ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 100 ಕೋಟಿ ರೂಪಾಯಿಗಳ ಹೂಡಿಕೆ ವಂಚನೆ ಪ್ರಕರಣ ಇದಾಗಿದ್ದು, ಬೆಂಗಳೂರು ಮೂಲದ ಕಂಪನಿ ಲಾಂಗ್ ರೀಚ್ ಟೆಕ್ನಾಲಜೀಸ್ ನಿಂದ ಸಾವಿರಾರು ಹೂಡಿಕೆದಾರರಿಂದ ಹಣವನ್ನು ಆನ್ ಲೈನ್ ಮೂಲಕ ಸಂಗ್ರಹಿಸಲಾಗಿದೆ. 

ಕಣ್ಣೂರು ಎಸಿಪಿ, ಪಿಪಿ ಸದಾನಂದನ್ ಈ ಬಗ್ಗೆ ಮಾತನಾಡಿದ್ದು, ಹೂಡಿಕೆದಾರರನ್ನು ಆಕರ್ಷಿಸುವುದಕ್ಕೆ ವಂಚಕರು ವಿವಿಧ ಜಾಹಿರಾತುಗಳನ್ನು ನೀಡಿದ್ದರು. ಆನ್ ಲೈನ್ ಮೂಲಕ ಹಣವನ್ನೂ ಪಡೆದಿದ್ದರು ಎಂದು ಹೇಳಿದ್ದಾರೆ. 

ಪಿಎಂ ಮುಹಮ್ಮದ್ ರಿಯಾಸ್ (31), ಕಾಸರಗೋಡು, ಆಲಂಪಾಡಿ, ಸಿ ಶಫೀಕ್ (30) ಮಂಜೇರಿ, ಮಳಪುರಂ, ವಸೀಮ್ ಮುನಾವರ್ ಅಲಿ (35) ಪವನ್ಗಡ್, ಕೋಜಿಕ್ಕೋಡ್ ಹಾಗೂ ಮುಹಮ್ಮದ್ ಶಫೀಕ್ (28) ವಂಡೂರ್ ಮಳಪ್ಪುರಂ ಬಂಧಿತ ವಂಚಕರಾಗಿದ್ದಾರೆ. 

ಈ ವಂಚಕರ ತಂಡ ಹೂಡಿಕೆದಾರರಿಗೆ ದಿನವೂ ಶೇ.2 ರಿಂದ 5 ರಷ್ಟು ಬಡ್ಡಿ ಬರುವುದಾಗಿ ನಂಬಿಸುತ್ತಿದ್ದರು. ಆದರೆ ಕೆಲವು ಹೂಡಿಕೆದಾರರಿಗೆ ಬಡ್ಡಿಯೂ ಇಲ್ಲದೇ ತಮ್ಮ ಹಣವೂ ವಾಪಸ್ಸಾಗದೇ ಇದ್ದಾಗ ವಂಚನೆಗೊಳಗಾಗಿದ್ದೇವೆ ಎಂಬ ಸತ್ಯ ಅರಿವಾಗತೊಡಗಿದೆ. ಹೂಡಿಕೆದಾರರ ಪೈಕಿ ಮುಹಮ್ಮದ್ ದಿಶಾದ್ ಎಂಬಾತ  ನಾಲ್ಕು ತಿಂಗಳ ಹಿಂದೆ ಕಣ್ಣೂರು ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.