ಭಾರತದ ಅತಿವೃಷ್ಟಿಯ ಮೂಲ 9,000 ಕಿ.ಮೀ ದೂರದ ಆರ್ಕ್ ಟಿಕ್ ಪ್ರದೇಶದಲ್ಲಿದೆ: ಬಟರ್ ಫ್ಲೈ ಎಫೆಕ್ಟ್ ಅಧ್ಯಯನ ವರದಿ
ಭೂಮಂಡಲದ ಯಾವುದೋ ದೂರದಲ್ಲಿ, ಖಂಡಗಳಾಚೆಗೆ ಉಂಟಾಗುವ ಬೆಳವಣಿಗೆಯಿಂದಾಗಿ ಇನ್ನೆಲ್ಲೋ ಅದರ ಪರಿಣಾಮ ಉಂಟಾಗುವುದನ್ನು ಬಟರ್ ಫ್ಲೈ ಎಫೆಕ್ಟ್ ಎನ್ನಲಾಗುತ್ತದೆ.

ನವದೆಹಲಿ: ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಭಾರತದ ಹಲವೆಡೆ ಬೀಳುತ್ತಿರುವ ಭಾರೀ ಮಳೆಗೆ ಆರ್ಕ್ ಟಿಕ್ ಪ್ರದೇಶದ ಬೆಳವಣಿಗೆ ಕಾರಣವಿರಬಹುದು ಎಂದು ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ಈ ಬಗ್ಗೆ ಬೆಳಕು ಚೆಲ್ಲಿದೆ. ನೇಚರ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ ಭಾರತೀಯ ಹಾಗೂ ನಾರ್ವೆ ವಿಜ್ಞಾನಿಗಳು ಭಾಗವಹಿಸಿದ್ದರು.
ಉತ್ತರ ಧ್ರುವ ಪ್ರದೇಶವಾದ ಆರ್ಕ್ ಟಿಕ್ ನಲ್ಲಿ ಮಂಜುಗಡ್ಡೆ ಅತಿ ವೇಗವಾಗಿ ಕರಗುತ್ತಿರುವುದೇ ಭಾರತದಲ್ಲಿನ ಅತಿವೃಷ್ಟಿಗೆ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಬಟರ್ ಫ್ಲೈ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಭೂಮಂಡಲದ ಯಾವುದೋ ದೂರದಲ್ಲಿ, ಖಂಡಗಳಾಚೆಗೆ ಉಂಟಾಗುವ ಬೆಳವಣಿಗೆಯಿಂದಾಗಿ ಇನ್ನೆಲ್ಲೋ ಅದರ ಪರಿಣಾಮ ಉಂಟಾಗುವುದನ್ನು ಬಟರ್ ಫ್ಲೈ ಎಫೆಕ್ಟ್ ಎನ್ನಲಾಗುತ್ತದೆ.
ಇದನ್ನೂ ಓದಿ: ಸತತ ಮಳೆಯಿಂದಾಗಿ ಚಿಕ್ಕಮಗಳೂರಿನಲ್ಲಿ ಭೂಕುಸಿತ
ಈ ಬಾರಿ ಅತ್ಯಧಿಕ ಪ್ರಮಾನದಲ್ಲಿ ಮಂಜುಗಡ್ಡೆ ಕರಗಿ ಸಮುದ್ರ ಸೇರಿದ್ದರಿಂದಾಗಿ ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ತೇವಾಂಶ ಹೆಚ್ಚಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿಯೂ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
ಮುಂದಿನ ದಿನಗಳ ಸಮುದ್ರ ಮತ್ತು ಮಂಜುಗಡ್ಡೆಯ ಪ್ರಮಾಣದ ನಡುವಿನ ಅನುಪಾತವನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸುವ ಅಗತ್ಯವನ್ನು ವಿಜ್ಞಾನಿಗಳು ಒತ್ತಿ ಹೇಳಿದ್ದಾರೆ.
Related Article
ಕೇರಳದಲ್ಲಿ ಮಳೆಯಿಂದ ಅಪಾರ ಹಾನಿ: ಪಿಣರಾಯಿ ವಿಜಯನ್ ಗೆ ಸಿಎಂ ಕರೆ, ಪರಿಹಾರ ಕಾರ್ಯಾಚರಣೆಗೆ ನೆರವಿನ ಭರವಸೆ
ಮೈಸೂರು: ಭಾರೀ ಮಳೆಯಿಂದ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ!
ಉತ್ತರಾಖಂಡ್ ಮಳೆ: ಮೃತರ ಸಂಖ್ಯೆ 16ಕ್ಕೆ ಏರಿಕೆ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ
ಮಳೆಗೆ ಕೇರಳ ತತ್ತರ: ಪ್ರವಾಹ, ಭೂ ಕುಸಿತದಿಂದ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


