ದೇಶ

ಕೋವಿಡ್ ನಿಂದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಪಿಂಚಣಿ ಯೋಚನೆ ಪ್ರಕಟಿಸಿದ ಕೇಂದ್ರ ಸರ್ಕಾರ

ಕೋವಿಡ್-19 ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಪಿಂಚಣಿ ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

ಕೋವಿಡ್ ನಿಂದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಪಿಂಚಣಿ ಯೋಚನೆ ಪ್ರಕಟಿಸಿದ ಕೇಂದ್ರ ಸರ್ಕಾರ
ಪ್ರಧಾನಿ ಮೋದಿ, ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಪಿಂಚಣಿ ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ. ಕುಟುಂಬವನ್ನು ಸಲಹಲು ಸಂಪಾದನೆ ಮಾಡುತ್ತಿದ್ದ ಸದಸ್ಯನನ್ನು ಕಳೆದುಕೊಂಡ ಕುಟುಂಬಗಳಿಗೆ ಇತರ ಪ್ರಯೋಜನಗಳನ್ನು ಪ್ರಕಟಿಸಲಾಗಿದೆ.

ಇಡಿಎಲ್ ಐ ಯೋಜನೆಯಡಿ ಕುಟುಂಬಗಳಿಗೆ ಪಿಂಚಣಿ, ವಿಮಾ ಯೋಜನೆ ಅಲ್ಲದೇ, ಉದಾರೀಕರಣ ಮಾಡಲಾಗಿದೆ. ಈ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ತೊಂದರೆಗಳನ್ನು ತಗ್ಗಿಸಲು ಈ ಕ್ರಮಗಳು ಸಹಾಯ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುಟುಂಬಗಳಿಗೆ ತಮ್ಮ ಸರ್ಕಾರ ಒಗ್ಗಟ್ಟಿನಲ್ಲಿ ನಿಂತಿದೆ ಎಂದು ಅವರು ತಿಳಿಸಿದ್ದಾರೆ.

ಕುಟುಂಬವು ಘನತೆಯ ಜೀವನವನ್ನು ನಡೆಸಲು ಮತ್ತು ಉತ್ತಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು,  ಉದ್ಯೋಗ ಸಂಬಂಧಿತ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದ ಇಎಸ್ಐಸಿ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೋವಿಡ್‌ನಿಂದ ಸಾವನ್ನಪ್ಪಿದವರಿಗೂ ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

ಅಸ್ತಿತ್ವದಲ್ಲಿರುವ ಮಾನದಂಡಗಳ ಪ್ರಕಾರ ಉದ್ಯೋಗಿಯು ಪಡೆಯುತ್ತಿದ್ದ ಸರಾಸರಿ ದೈನಂದಿನ ವೇತನದ ಶೇ.90 ಕ್ಕೆ ಸಮಾನವಾದ ಪಿಂಚಣಿ ಸೌಲಭ್ಯವನ್ನು ಮೃತ ವ್ಯಕ್ತಿಗಳ ಅವಲಂಬಿತ ಕುಟುಂಬ ಸದಸ್ಯರು ಪಡೆಯುತ್ತಾರೆ. ಈ ಸೌಲಭ್ಯವು 24.03.2020 ರಿಂದ ಪೂರ್ವಾನ್ವಯವಾಗಿ ಮತ್ತು 24.03.2022 ರವರೆಗೆ ಎಲ್ಲಾ ಪ್ರಕರಣಗಳಿಗೆ ಅನ್ವಯವಾಗುತ್ತದೆ.

ಇಡಿಎಲ್ಐ ಯೋಜನೆಯಡಿ ವಿಮಾ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ ಮತ್ತು ಉದಾರೀಕರಣ ಮಾಡಲಾಗಿದೆ. ಇದು ಇತರ ಎಲ್ಲಾ ಫಲಾನುಭವಿಗಳೊಂದಿಗೆ, ನಿರ್ದಿಷ್ಟವಾಗಿ ಕೋವಿಡ್ ನಿಂದ ಪ್ರಾಣ ಕಳೆದುಕೊಂಡ ನೌಕರರ ಕುಟುಂಬಗಳಿಗೆ ಸಹಾಯ ಮಾಡುತ್ತದೆ.

ಗರಿಷ್ಠ ವಿಮಾ ಲಾಭದ ಮೊತ್ತವನ್ನು 6 ಲಕ್ಷ ರೂ. ಗಳಿಂದ 7 ಲಕ್ಷ ರೂ. ಗಳಿಗೆ  ಹೆಚ್ಚಿಸಲಾಗಿದೆ 2.5 ಲಕ್ಷ ರೂ. ಕನಿಷ್ಠ ವಿಮಾ ಪ್ರಯೋಜನವನ್ನು ಮರುಸ್ಥಾಪಿಸಲಾಗಿದೆ ಮತ್ತು 2020 ರ ಫೆಬ್ರವರಿ 15 ರಿಂದ ಪೂರ್ವಾನ್ವಯದೊಂದಿಗೆ ಮುಂದಿನ ಮೂರು ವರ್ಷಗಳವರೆಗೆ ಇದು ಅನ್ವಯವಾಗುತ್ತದೆ. ಗುತ್ತಿಗೆ / ಸಾಂದರ್ಭಿಕ ನೌಕರರ ಕುಟುಂಬಗಳಿಗೆ ಅನುಕೂಲವಾಗುವಂತೆ, ಕೇವಲ ಒಂದು ಸಂಸ್ಥೆಯಲ್ಲಿ ನಿರಂತರ ಉದ್ಯೋಗದಲ್ಲಿರಬೇಕಿದ್ದ ನಿಯಮವನ್ನು ಉದಾರೀಕರಣಗೊಳಿಸಲಾಗಿದ್ದು, ಸಾವಿಗೆ ಮುಂಚಿನ ಕಳೆದ 12 ತಿಂಗಳುಗಳಲ್ಲಿ ಸಂಸ್ಥೆಗಳನ್ನು ಬದಲಿಸಿದ ನೌಕರರ ಕುಟುಂಬಗಳಿಗೂ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಪಧಾನಮಂತ್ರಿ
ಕಾರ್ಯಾಲಯ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.