ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ 1,000 ಕೋಟಿ ರೂ. ಮಾನನಷ್ಟ ನೋಟೀಸ್
ಅಲೋಪತಿ ವೈದ್ಯ ಪದ್ದತಿ ಹಾಗೂ ಔಷಧಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ ಉತ್ತರಾಖಂಡ ರಾಜ್ಯದ ವೈದ್ಯರ ತಂಡ 1,000 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡಿದೆ.

ಡೆಹ್ರಾಡೂನ್: ಅಲೋಪತಿ ವೈದ್ಯ ಪದ್ದತಿ ಹಾಗೂ ಔಷಧಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ ಉತ್ತರಾಖಂಡ ರಾಜ್ಯದ ವೈದ್ಯರ ತಂಡ 1,000 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡಿದೆ.
15 ದಿನಗಳಲ್ಲಿ ಭಾಬಾ ರಾಂ ದೇವ್ ಲಿಖಿತ ಕ್ಷಮಾಪಣೆ ಕೋರಬೇಕು, ಇಲ್ಲವಾದರೆ ರೂ 1,000 ಕೋಟಿ ರೂ ಮಾನನಷ್ಟ ದಾವೆ ಎದುರಿಸಬೇಕು ಉತ್ತರಾಖಂಡ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ನೋಟೀಸ್ ಕಳುಹಿಸಿದೆ. ಬಾಬಾ ರಾಮ್ ದೇವ್ ಅವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರಿಗೂ ಪತ್ರ ಬರೆದಿದೆ.
ಅಲೋಪಥಿ ವೈದ್ಯಪದ್ದತಿ ಹಾಗೂ ಔಷಧಿಗಳ ಬಗ್ಗೆ ಬಾಬಾ ರಾಮ್ ದೇವ್ ಇತ್ತೀಚಿಗೆ ನೀಡಿದ್ದ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 'ಅಲೋಪತಿ ಒಂದು ನಿಷ್ಪ್ರಯೋಜಕ ಚಿಕಿತ್ಸೆ' ಎಂಬ ಅವರ ಹೇಳಿಕೆಯ ವೀಡಿಯೊ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಿಂದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು.
‘ಅಲೋಪತಿ ವೈದ್ಯ ಪದ್ದತಿ ಹಾಗೂ ಔಷಧಿಗಳ ಕುರಿತು ನಿಮ್ಮ ಅಭಿಪ್ರಾಯಗಳು ಅತ್ಯಂತ ದುರದೃಷ್ಟಕರ. ಇದು ಕೊರೊನ ಯೋಧರನ್ನು ಅವಮಾನಿಸುವುದಲ್ಲದೆ .ಆರೋಗ್ಯ ಕಾರ್ಯಕರ್ತರ ಮನೋ ಸ್ಥೈರ್ಯವನ್ನು ಹಾಳು ಗೆಡವಲಿದೆ ಎಂದು ಹೇಳಿದ್ದರು. ನಿಮ್ಮ ಹೇಳಿಕೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಿ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಾಬಾ ರಾಮ್ ದೇವ್ ಅವರಿಗೆ ಬರೆದ ಪತ್ರದಲ್ಲಿಸೂಚಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಾಬಾ ರಾಮ್ ದೇವ್ ಕೂಡಲೇ ಕ್ಷಮೆಯಾಚಿಸಿ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು, ಎಲ್ಲಾ ರೀತಿಯ ವೈದ್ಯಕೀಯ ಪದ್ದತಿಗಳನ್ನು ಗೌರವಿಸುವುದಾಗಿ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


