ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ: ಒಂದೇ ಕ್ಷಣದಲ್ಲಿ ಬರುತ್ತೆ ಫಲಿತಾಂಶ!
ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಒಂದೇ ಕ್ಷಣದಲ್ಲಿ ಫಲಿತಾಂಶ ಬರಲಿದೆ.

ನವದೆಹಲಿ: ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಒಂದೇ ಕ್ಷಣದಲ್ಲಿ ಫಲಿತಾಂಶ ಬರಲಿದೆ. ವಿಜ್ಞಾನಿಗಳು ಹೊಸ ಮಾದರಿಯ ಸಂವೇದಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಈಗಿನ ಕೋವಿಡ್-19 ಪತ್ತೆಯ ವಿಧಾನಗಳಿಗಿಂತಲೂ ಇದು ತ್ವರಿತವಾಗಿ ಫಲಿತಾಂಶವನ್ನು ನೀಡಲಿದೆ.
ಕೊರೋನಾ ವೈರಸ್ ಇರುವಿಕೆಯನ್ನು ಪತ್ತೆ ಮಾಡುವುದಕ್ಕೆ, ಜೆನೆಟಿಕ್ ಅಂಶಗಳ ಪ್ರತಿಗಳಂತಹ ವೈರಲ್ ಬಯೋಮೇಕರ್ಸ್ ನ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ. ಇದನ್ನು ಪಾಲಿಮರೇಸ್ ಚೈನ್ ರಿಯಾಕ್ಷನ್ ಎಂದು ಕರೆಯಲ್ಪಡುವ ತಂತ್ರವನ್ನು ಪ್ರಯೋಗಿಸಿ ಮಾಡಲಾಗುತ್ತದೆ, ಅಥವಾ ಟಾರ್ಗೆಟ್ ಬಯೋಮೇಕರ್ ಗೆ ಬೈಂಡಿಂಗ್ ಸಿಗ್ನಲ್ ನ್ನು ಹೆಚ್ಚಿಸುವ ವಿಧಾನವನ್ನು ಅನುಸರಿಸಲಾಗುತ್ತದೆ.
ಜರ್ನಲ್ ಆಫ್ ವ್ಯಾಕ್ಯೂಮ್ ಸೈನ್ಸ್& ಟೆಕ್ನಾಲಜಿಯಲ್ಲಿ ವಿವರಿಸಲಾಗಿರುವ ಸೂಕ್ಷ್ಮ ಪರೀಕ್ಷಾ ವಿಧಾನದಲ್ಲಿ ಮೇಲೆ ಹೇಳಿರುವ ಎರಡನೇ ರೀತಿಯ ವಿಧಾನವನ್ನು ಅತ್ಯಾಧುನಿಕವಾಗಿ ಬಳಕೆ ಮಾಡಲಾಗುತ್ತದೆ
ಕೆಲವು ರಿವರ್ಸ್ ಟ್ರಾನ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ ಟಿ-ಪಿಸಿಆರ್) ಟೆಸ್ಟ್ ಗಳನ್ನು ಕೋವಿಡ್-19 ಪರೀಕ್ಷೆಗೆ ಹೆಚ್ಚು ಅಧಿಕೃತ ಎಂದು ಪರಿಗಣಿಸಲಾಗಿದೆ. ಕೆಲವು ಪಿಸಿಆರ್ ಟೆಸ್ಟ್ ಗಳು ಕೆಲವೇ ಗಂಟೆಗಳಲ್ಲಿ ಫಲಿತಾಂಶವನ್ನು ನೀಡಿದರೆ ಮತ್ತೆ ಕೆಲವು ದಿನಗಳ ನಂತರ ಸಿಗುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


