ಒಂದೇ ದಿನದಲ್ಲಿ ದಾಖಲೆಯ 20 ಲಕ್ಷ ಕೊರೋನಾ ವೈರಸ್ ಪತ್ತೆ ಪರೀಕ್ಷೆ; ಚೇತರಿಕೆ ಪ್ರಮಾಣ ಶೇ.86.23: ಆರೋಗ್ಯ ಸಚಿವಾಲಯ
ದೇಶಾದ್ಯಂತ 24 ಗಂಟೆಗಳಲ್ಲಿ ದಾಖಲೆಯ 20 ಲಕ್ಷ ಕೊರೋನಾ ವೈರಾಣು ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಸೋಂಕು ಪತ್ತೆ ಪರೀಕ್ಷೆಯ ದಾಖಲೆ ಸಂಖ್ಯೆಯಾಗಿದೆ.

ನವದೆಹಲಿ: ದೇಶಾದ್ಯಂತ 24 ಗಂಟೆಗಳಲ್ಲಿ ದಾಖಲೆಯ 20 ಲಕ್ಷ ಕೊರೋನಾ ವೈರಾಣು ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ದಾಖಲೆಯ ಸೋಂಕು ಪತ್ತೆ ಪರೀಕ್ಷೆಯ ಸಂಖ್ಯೆಯಾಗಿದ್ದು, ಭಾರತದಲ್ಲಿ ಒಂದೇ ದಿನ ನಡೆದ ಅತಿ ಹೆಚ್ಚಿನ ಪರೀಕ್ಷೆಯಾಗಿದೆ.
ದಿನನಿತ್ಯದ ಸೋಂಕು ವರದಿಯ ಪ್ರಮಾಣ ಶೇ.13.31 ಕ್ಕೆ ಕುಸಿತ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಹೊಸ ಪ್ರಕರಣಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿರುವುದು ಸತತ 6 ನೇ ದಿನವೂ ಮುಂದುವರೆದಿದೆ ಎಂದು ಹೇಳಿದೆ.
ಈ ವರೆಗೂ ಒಟ್ಟು 2,19,86,363 ಮಂದಿ ಚೇತರಿಕೆ ಕಂಡಿದ್ದು, 3,89,851 ರೋಗಿಗಳು ದಿನವೊಂದಕ್ಕೆ ಚೇತರಿಕೆ ಕಾಣುತ್ತಿದ್ದು ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.86.23 ರಷ್ಟಿದೆ. ಈ ವರೆಗೂ ದೇಶಾದ್ಯಂತ 32 ಕೋಟಿ ಟೆಸ್ಟ್ ಗಳನ್ನು ಮಾಡಲಾಗಿದ್ದು, ಒಟ್ಟು ಪಾಸಿಟಿವಿಟಿ ಪ್ರಮಾಣ ಶೇ.7.96 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಸತತ ಮೂರನೇ ದಿನವೂ 3 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದೇಶದಲ್ಲಿ ವರದಿಯಾಗಿದೆ. ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣಗಳಲ್ಲಿ ದೇಶದ ಶೇ.74.46 ಕೊರೋನಾ ಪ್ರಕರಣಗಳಿದ್ದು, 24 ಗಂಟೆಗಳಲ್ಲಿ 2,67,334 ಪ್ರಕರಣಗಳು ವರದಿಯಾಗಿವೆ, ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ ದಿನವೊಂದಕ್ಕೆ 33,059, ಕೇರಳದಲ್ಲಿ 31,337 ಹೊಸ ಪ್ರಕರಣಗಳು ವರದಿಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


