ಮುಂಬೈ: ಟೌಕ್ಟೆ ಚಂಡಮಾರುತಕ್ಕೆ 273 ಮಂದಿ ಇದ್ದ ಬಾರ್ಜ್ ದಿಕ್ಕಾಪಾಲು!
ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ.

ಮುಂಬೈ: ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ.
ಟೌಕ್ಟೆ ಚಂಡಮಾರುತ ಮೇ.17 ರಂದು ಸಂಜೆ ಗುಜರಾತ್ ನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನ ಬಾಂಬೆ ಹೈ ಏರಿಯಾದ ಹೀರಾ ಆಯಿಲ್ ಫೀಲ್ಡ್ಸ್ ನಿಂದ ಬಾರ್ಜ್ P305 ದಿಕ್ಕಾಪಾಲಾಗಿದ್ದು, ಈ ಬಾರ್ಜ್ ನಲ್ಲಿ 273 ಮಂದಿ ಇದ್ದರು. ಬಾರ್ಜ್ ನಲ್ಲಿದ್ದವರ ಶೋಧ, ರಕ್ಷಣೆ ಕಾರ್ಯಾಚರಣೆಗಾಗಿ ಐಎನ್ಎಸ್ ಕೊಚ್ಚಿಯನ್ನು ಕಳಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಆಯಿಲ್ ಫೀಲ್ಡ್ಸ್ ಮುಂಬೈ ನ ನೈರುತ್ಯದಾದ್ಯಂತ 70 ಕಿ.ಮೀ ವರೆಗೂ ಕಾಣಸಿಗುತ್ತದೆ. ಟೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕಾಗಿ ಹಲವು ಹಡಗುಗಳನ್ನು ಕಳಿಸಲಾಗಿದೆ.
ಯುದ್ಧನೌಕೆ ಬಾರ್ಜ್ ನ್ನು ಸಂಜೆ 4 ಗಂಟೆ ವೇಳೆಗೆ ತಲುಪಲಿದೆ. ಇನ್ನು ಚಂಡಮಾರುತದ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ವರೆಗೆ ಸ್ಥಗಿತಗೊಳಿಸಲಾಗಿತ್ತು. ರಾಯ್ ಘಡ ಜಿಲ್ಲೆ ಸೇರಿದಂತೆ ಹಲವೆಡೆ ರೆಡ್ ಅಲರ್ಟ್ ನ್ನು ಘೋಷಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


