ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ; ಪಾಸಿಟಿವಿಟಿ ದರ ಶೇ.16.98ಕ್ಕೆ ಕುಸಿತ: ಕೇಂದ್ರ ಸರ್ಕಾರ
ಕಳೆದ 24 ಗಂಟೆಗಳ ಅವಧಿಯಲ್ಲಿ 55,344 ಪ್ರಕರಣಗಳ ನಿವ್ವಳ ಇಳಿಕೆಯೊಂದಿಗೆ ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 36,18,458ಕ್ಕೆ ಕಡಿಮೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ.16.98ಕ್ಕೆ ಕುಸಿತವಾಗಿದೆ. ಇದು ಒಟ್ಟು ಸೋಂಕು ಪ್ರಕರಣಗಳ ಶೇ. 14.66 ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ 55,344 ಪ್ರಕರಣಗಳ ನಿವ್ವಳ ಇಳಿಕೆಯೊಂದಿಗೆ ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 36,18,458ಕ್ಕೆ ಕಡಿಮೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ.16.98ಕ್ಕೆ ಕುಸಿತವಾಗಿದೆ. ಇದು ಒಟ್ಟು ಸೋಂಕು ಪ್ರಕರಣಗಳ ಶೇ. 14.66 ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ತಮಿಳುನಾಡು, ಆಂಧ್ರ ಪ್ರದೇಶ ,ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್
ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ದೇಶದ ಒಟ್ಟು ಶೇ.74.69 ರಷ್ಟು ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಕೂಡಾ
ಇಳಿಕೆಯಾಗುತ್ತಿದೆ. ಮೇ 3 ರಂದು ಶೇ. 24.47 ರಷ್ಟಿದ್ದ ಪಾಸಿಟಿವಿಟಿ ದರ ಮೇ 16 ರಂದು ಶೇ.16.98ಕ್ಕೆ ಕುಸಿತವಾಗಿದೆ ಎಂದು
ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 3 ಲಕ್ಷದ 62 ಸಾವಿರದ 437 ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೇ ಗುಣಮುಖರಾದವರ ಸಂಖ್ಯೆ
2,07,95,335ಕ್ಕೆ ಏರಿಕೆಯಾಗಿದೆ. ಚೇತರಿಸಿಕೊಂಡವರಲ್ಲಿ ಶೇ.70.94 ಮಂದಿ ಗರಿಷ್ಠ ಪ್ರಕರಣಗಳಿರುವ 10 ರಾಜ್ಯಗಳಿಗೆ
ಸೇರಿದವರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3, 11,170 ಪ್ರಕರಣ ದೃಢಪಟ್ಟಿದ್ದು, ಇವುಗಳ ಪೈಕಿ ಶೇ. 74.7 ರಷ್ಟು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 10 ರಾಜ್ಯಗಳಿವೆ.
ಕರ್ನಾಟಕದಲ್ಲಿ ಗರಿಷ್ಠ 41,664, ಮಹಾರಾಷ್ಟ್ರದಲ್ಲಿ 34,848, ತಮಿಳುನಾಡಿನಲ್ಲಿ 33,658, ಪ್ರಕರಣಗಳು ವರದಿಯಾಗಿವೆ. ಮರಣ ಪ್ರಮಾಣ ಶೇ.1.09 ರಷ್ಟಿದೆ. ನಿನ್ನೆ ಒಂದೇ ದಿನ ಒಟ್ಟಾರೇ 4,077 ಸಾವಿನ ಪ್ರಕರಣಗಳು ವರದಿಯಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


