ವೇಗವಾಗಿ 17 ಕೋಟಿ ಡೋಸ್ ಲಸಿಕೆ ಹಾಕಿದ ಮೊದಲ ದೇಶ; ವಿಶ್ವದಲ್ಲೇ ಅತಿ ವೇಗದ ಲಸಿಕಾ ಅಭಿಯಾನಕ್ಕೆ ಭಾರತ ಸಾಕ್ಷಿ
ಭಾರತ ಜಾಗತಿಕವಾಗಿ ಅತಿ ಹೆಚ್ಚು ವೇಗವಾಗಿ ಕೋವಿಡ್-19 ಲಸಿಕೆ ನೀಡುವ ದೇಶವಾಗಿ ಹೊರಹೊಮ್ಮಿದ್ದು, ಇಲ್ಲಿಯವರೆಗೆ 17 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.

ನವದೆಹಲಿ: ಭಾರತ ಜಾಗತಿಕವಾಗಿ ಅತಿ ಹೆಚ್ಚು ವೇಗವಾಗಿ ಕೋವಿಡ್-19 ಲಸಿಕೆ ನೀಡುವ ದೇಶವಾಗಿ ಹೊರಹೊಮ್ಮಿದ್ದು, ಇಲ್ಲಿಯವರೆಗೆ 17 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.
ಆ ಮೂಲಕ ವೇಗವಾಗಿ 17 ಕೋಟಿ ಡೋಸ್ ಲಸಿಕೆಯನ್ನು ಹಾಕಿದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ. ಈ ಪ್ರಮಾಣದ ಲಸಿಕೆಯನ್ನು ಭಾರತ 114 ದಿನಗಳಲ್ಲಿ ವಿತರಿಸಿದ್ದು, ಚೀನಾ 119 ದಿನಗಳನ್ನು ತೆಗೆದುಕೊಂಡಿತ್ತು. ಇದೇ ಹೆಗ್ಗುರುತನ್ನು ತಲುಪಲು ಯುಎಸ್ 115 ದಿನಗಳನ್ನು ತೆಗೆದುಕೊಂಡಿದೆ ಎಂದು ಸಚಿವಾಲಯ ತಿಳಿಸಿದೆ.
ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 17,01,76,603 ಡೋಸ್ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಈ ಪೈಕಿ ಇದರಲ್ಲಿ 95,47,102 ಆರೋಗ್ಯ ಕಾರ್ಯಕರ್ತರು ಮೊದಲನೇ ಹಾಗೂ 64,71,385 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 1,39,72,612 ಮುಂಚೂಣಿ ಕಾರ್ಯಕರ್ತರು ಮೊದಲನೇ ಹಾಗೂ 77,55,283 ಕಾರ್ಯಕರ್ತರು ಎರಡನೇ ಡೋಸ್ ಪಡೆದಿದ್ದಾರೆ. 18-45 ವಯಸ್ಸಿನ (1 ನೇ ಡೋಸ್) 20,31,854 ಫಲಾನುಭವಿಗಳು, 5,51,79,217 (1 ನೇ ಡೋಸ್) ಪಡೆದಿದ್ದಾರೆ.
45 ರಿಂದ 60 ವರ್ಷ ವಯಸ್ಸಿನ 65,61,851 (2 ನೇ ಡೋಸ್) ಫಲಾನುಭವಿಗಳು. 5,36,74,082 1 ನೇ ಡೋಸ್ ಫಲಾನುಭವಿಗಳು ಮತ್ತು 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ 1,49,83,217 2 ನೇ ಡೋಸ್ ಫಲಾನುಭವಿಗಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 6.8 ಲಕ್ಷಕ್ಕೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಯಿತು ಎಂದು ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


