ದೇಶ

ಸಿಪಿಐ(ಎಂ) ಮುಖಂಡ, ಪಿಂಜ್ರಾ ಟಾಡ್ ಕಾರ್ಯಕರ್ತೆ ನತಾಶಾ ತಂದೆ ಮಹಾವೀರ್‌ ನರ್ವಾಲ್ ಕೋವಿಡ್ ಗೆ ಬಲಿ

ವಿಜ್ಞಾನಿ ಹಾಗೂ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಹಾಗೂ ಪಿಂಜ್ರಾ ಟಾಡ್ ಕಾರ್ಯಕರ್ತೆಯಾಗಿರುವ ಮಹಾವೀರ್‌ ಅವರ ಪುತ್ರಿ ನತಾಶಾ ನರ್ವಾಲ್‌ ತಂದೆ ಮಹಾವೀರ್‌ ನರ್ವಾಲ್ ಅವರು ಭಾನುವಾರ ನಿಧನರಾದರು.

ಸಿಪಿಐ(ಎಂ) ಮುಖಂಡ, ಪಿಂಜ್ರಾ ಟಾಡ್ ಕಾರ್ಯಕರ್ತೆ ನತಾಶಾ ತಂದೆ ಮಹಾವೀರ್‌ ನರ್ವಾಲ್ ಕೋವಿಡ್ ಗೆ ಬಲಿ
ಮಹಾವೀರ್ ನರ್ವಾಲ್
Published On :

ನವದೆಹಲಿ: ವಿಜ್ಞಾನಿ ಹಾಗೂ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ  ಹಾಗೂ ಪಿಂಜ್ರಾ ಟಾಡ್ ಕಾರ್ಯಕರ್ತೆಯಾಗಿರುವ ಮಹಾವೀರ್‌ ಅವರ ಪುತ್ರಿ ನತಾಶಾ ನರ್ವಾಲ್‌ ತಂದೆ ಮಹಾವೀರ್‌ ನರ್ವಾಲ್ ಅವರು ಭಾನುವಾರ ನಿಧನರಾದರು. 

ಮಹಾವೀರ್‌ ನರ್ವಾಲ್ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಮಹಾವೀರ್‌ ನರ್ವಾಲ್‌ ಅವರ ಪುತ್ರ ಆಕಾಶ್‌ ನರ್ವಾಲ್ ಅವರಿಗೂ ಕೋವಿಡ್‌ ದೃಢಪಟ್ಟಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಂಜ್ರಾ ಟಾಡ್ ಕಾರ್ಯಕರ್ತೆಯಾಗಿರುವ ಮಹಾವೀರ್‌ ಅವರ ಪುತ್ರಿ ನತಾಶಾ ನರ್ವಾಲ್‌ ತಿಹಾರ್‌ ಜೈಲಿನಲ್ಲಿದ್ದಾರೆ. ಮಹಾವೀರ್‌ ಅವರಿಗೆ ಕೊನೆಯಲ್ಲಿ ಮಗಳೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಅವರ ಕುಟುಂಬದ  ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.