ದೇಶ

ಮೊದಲ ಪ್ರಕರಣ: ಕೋವಿಡ್-19 ನಿಂದ ಎನ್ಎಸ್ ಜಿ ಅಧಿಕಾರಿ ಸಾವು!

ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆ ಎನ್ಎಸ್ ಜಿ ಕೋವಿಡ್-19 ಸಂಬಂಧಿತ ಸಾವಿನ ಮೊದಲ ಪ್ರಕರಣವನ್ನು ಪ್ರಕಟಿಸಿದೆ.

ಮೊದಲ ಪ್ರಕರಣ: ಕೋವಿಡ್-19 ನಿಂದ ಎನ್ಎಸ್ ಜಿ ಅಧಿಕಾರಿ ಸಾವು!
ಎನ್ ಎಸ್ ಜಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆ ಎನ್ಎಸ್ ಜಿ ಕೋವಿಡ್-19 ಸಂಬಂಧಿತ ಸಾವಿನ ಮೊದಲ ಪ್ರಕರಣವನ್ನು ಪ್ರಕಟಿಸಿದೆ. ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್ ಜಿ)ಯ ಅಧಿಕಾರಿಯೊಬ್ಬರು ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ. 

ಗ್ರೂಪ್ ಕಮಾಂಡರ್ (ಕೋ-ಆರ್ಡಿನೇಷನ್) ಬಿ.ಕೆ. ಝಾ (53) ಅವರನ್ನು ಗ್ರೇಟರ್ ನೋಯ್ಡಾದ ಕೇಂದ್ರ ಸೇನಾ ಪೊಲೀಸ್ ಪಡೆಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಸೋಂಕು ತೀವ್ರವಾದ ಪರಿಣಾಮ ಮೇ 05 ರಂದು ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಎನ್ಎಸ್ ಜಿ ಹೇಳಿದೆ. 

ಎನ್ ಎಸ್ ಜಿ ವ್ಯಾಪ್ತಿಯಲ್ಲಿ ವರದಿಯಾಗಿರುವ ಮೊದಲ ಸಾವು ಇದಾಗಿದೆ. ಈ ಅಧಿಕಾರಿ ಎನ್ ಎಸ್ ಜಿ ಪಡೆಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಯಾಚರಣೆಯ ವಿಭಾಗದಲ್ಲಿ ಇರಲಿಲ್ಲ ಎಂದು ಎನ್ಎಸ್ ಜಿ ಸ್ಪಷ್ಟನೆ ನೀಡಿದೆ. ಬಿಹಾರ ಮೂಲದವರಾದ ಝಾ, 1993 ರ ಬ್ಯಾಚ್ ನ ಬಿಎಸ್ಎಫ್ ಕೇಡರ್ ನ ಅಧಿಕಾರಿಯಾಗಿದ್ದರು. 

ಬಿಎಸ್ಎಫ್ ನಿಂದ 2018 ರಲ್ಲಿ ಅವರನ್ನು ಎನ್ಎಸ್ ಜಿಗೆ ನಿಯುಕ್ತಿಗೊಳಿಸಲಾಗಿತ್ತು. ಇದಕ್ಕೂ ಮುನ್ನ ಝಾ ಅವರು ಬಿಎಸ್ಎಫ್ ಮಹಾನಿರ್ದೇಶಕರ ಪ್ರಧಾನ ಸಿಬ್ಬಂದಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 

ಉಭಯ ಪಡೆಗಳೂ ಝಾ ಅವರ ಸಾವಿಗೆ ಸಂತಾಪ ಸೂಚಿಸಿವೆ. ಎನ್ಎಸ್ ಜಿ ಅಂಕಿ-ಅಂಶಗಳ ಪ್ರಕಾರ ತನ್ನ ವ್ಯಾಪ್ತಿಯಲ್ಲಿ ಈ ವರೆಗೂ 430 ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ಹೊಂದಿತ್ತು ಈ ಪೈಕಿ 59 ಸಕ್ರಿಯ ಪ್ರಕರಣಗಳಿವೆ. ಎನ್ಎಸ್ ಜಿ ಹಾಗೂ ಎನ್ ಡಿಆರ್ ಎಫ್ ನಲ್ಲಿ ಒಟ್ಟು 66,000 ಕೋವಿಡ್-19 ಪ್ರಕರಾಣಗಳಿದ್ದು, 7,900 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ನಿಂದ ಈ ವರೆಗೂ 248 ಸಾವುಗಳು ಸಂಭವಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.