ನಕಲಿ ಕೋವಿಡ್ ಲಸಿಕೆ ಪಡೆದಿದ್ದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿಗೆ ಅನಾರೋಗ್ಯ!
ನಕಲಿ ಕೋವಿಡ್ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ನಟಿ ಕಮ್ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಕೋಲ್ಕತಾ: ನಕಲಿ ಕೋವಿಡ್ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ನಟಿ ಕಮ್ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಜಾದವ್‌ಪುರ ಸಂಸದೆ ಹಾಜರಾದ ವೈದ್ಯರು, ನಾಲ್ಕು ದಿನಗಳ ಹಿಂದೆ ತೆಗೆದುಕೊಂಡ ನಕಲಿ ಡೋಸ್ ಅನಾರೋಗ್ಯಕ್ಕೆ ಕಾರಣ ಎಂದು ಇಷ್ಟು ಬೇಗ ಹೇಳಲು ಸಾಧ್ಯವಿಲ್ಲ. ಚಕ್ರವರ್ತಿ ಬೆಳಿಗ್ಗೆ ತನ್ನ ನಿವಾಸದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೂಡಲೇ ಅವರ ಮನೆ ಕೆಲಸದವರು ಕುಟುಂಬದ ವೈದ್ಯರನ್ನು ಕರೆಸಲಾಯಿತು ಎಂದು ನಟಿಯ ಆಪ್ತ ಮೂಲಗಳು ತಿಳಿಸಿವೆ.
ಪಿತ್ತಕೋಶ ಮತ್ತು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಟಿ ಬಳಲುತ್ತಿದ್ದಾರೆ. ನಿರ್ಜಲೀಕರಣ, ಹೊಟ್ಟೆ ನೋವು ಮತ್ತು ರಕ್ತದೊತ್ತಡದಲ್ಲಿ ಏರಿಳಿಕೆಯಾಗುತ್ತಿದೆ ಎಂದು ಅವರು ಹೇಳಿದರು.
ಸದ್ಯ ಮಿಮಿ ಚಕ್ರವರ್ತಿಯ ಸ್ಥಿತಿ ಸ್ಥಿರವಾಗಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವರ ಅನಾರೋಗ್ಯಕ್ಕೆ ನಕಲಿ ಲಸಿಕೆ ಕಾರಣ ಎಂದು ತಕ್ಷಣವೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ವೈದ್ಯರು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಕೋಲ್ಕತ್ತಾದಲ್ಲಿ ನಾಗರಿಕ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೋರ್ವ ಲಸಿಕೆ ಅಭಿಯಾನವನ್ನು ಆಯೋಜಿಸಿದ್ದು ಅದರಲ್ಲಿ ಮಿಮಿ ಚಕ್ರವರ್ತಿಗೆ ಲಸಿಕೆ ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


