ಭಾರತ್ ವ್ಯಾಟಿಕಾ: ಉತ್ತರಾಖಂಡ್ ನಲ್ಲಿ ಜೀವ ವೈವಿದ್ಯ ಉದ್ಯಾನವನ!
ದೇಶದಲ್ಲಿ ಇದೇ ಪ್ರಥಮ ಬಾರಿಗೆ 28 ಪ್ರಾಂತ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಮರಗಳನ್ನು ಹೊಂದಿರುವ ಜೀವ ವೈವಿಧ್ಯ 'ಭಾರತ್ ವ್ಯಾಟಿಕಾ' ಉತ್ತರಾಖಂಡ್ ನಲ್ಲಿ ಶನಿವಾರ ಉದ್ಘಾಟನೆಗೊಂಡಿತು.

ಡೆಹ್ರಾಡೂನ್: ದೇಶದಲ್ಲಿ ಇದೇ ಪ್ರಥಮ ಬಾರಿಗೆ 28 ಪ್ರಾಂತ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಮರಗಳನ್ನು ಹೊಂದಿರುವ ಜೀವ ವೈವಿಧ್ಯ 'ಭಾರತ್ ವ್ಯಾಟಿಕಾ' ಉತ್ತರಾಖಂಡ್ ನಲ್ಲಿ ಶನಿವಾರ ಉದ್ಘಾಟನೆಗೊಂಡಿತು.
ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ವ್ಯಾಟಿಕಾ, ದೇಶದ ಭವ್ಯ ಜೈವಿಕ ವೈವಿಧ್ಯತೆಯ ಪ್ರದರ್ಶನದೊಂದಿಗೆ ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಮಾರ್ಚ್ 2020ಕ್ಕೂ ಮುಂಚೆ ಒಂದೂವರೆ ವರ್ಷಗಳ ಹಿಂದೆ ಇದನ್ನು ಆರಂಭಿಸಲು ಪ್ರಯತ್ನಿಸಲಾಯಿತು. ದೊಡ್ಡ ಪ್ರಯತ್ನದೊಂದಿಗೆ ಪ್ರತಿಯೊಂದು ತಳಿಯನ್ನು ಸಂಗ್ರಹಿಸಲಾಗಿದೆ. ದೇಶದ ಭವ್ಯ ಜೈವಿಕ ವೈವಿಧ್ಯತೆಯ ಪ್ರದರ್ಶನದೊಂದಿಗೆ ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವುದು ಭಾರತ್ ವಾಟಿಕ ಅವರ ಉದ್ದೇಶವಾಗಿದೆ ಎಂದು ಐಎಫ್ ಎಸ್ ಅಧಿಕಾರಿ ಚತುರ್ವೇದಿ ತಿಳಿಸಿದರು.
ಉಷ್ಣವಲಯದ ಆರ್ದ್ರ, ಆರ್ದ್ರ, ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳು, ನಿತ್ಯಹರಿದ್ವರ್ಣ ಕಾಡುಗಳನ್ನು ಹೊಂದಿರುವ ಪ್ರದೇಶಗಳು ಮತ್ತು ವಿವಿಧ ಹವಾಮಾನಗಳ ಮರಗಳಾಗಿವೆ. ಕೆಲವೊಂದು ಸಸಿಗಳು ಚಳಿಗಾಲಕ್ಕೆ ಹೊಂದಿಕೊಳ್ಳಲಾರವು, ಕೆಲವೊಂದು ಬೇಸಿಗೆ ಕಾಲಕ್ಕೆ ಹೊಂದಿಕೊಳ್ಳುವಂತಹ ಮರಗಳಾಗಿವೆ. ವಿವಿಧ ರಾಜ್ಯಗಳ ಮರಗಳನ್ನು ಇದೇ ಮೊದಲ ಬಾರಿಗೆ ಒಂದೇ ಜಾಗದಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಹಾರಾಷ್ಟ್ರ ಮತ್ತು ಚಂಡೀಘಡ ರಾಜ್ಯಗಳ ಮಾವು, ತೆಲಂಗಾಣ ಮತ್ತು ರಾಜಸ್ಥಾನದ ಖೇಜಾರಿ, ಗುಜರಾತ್ ಮತ್ತು ಮಧ್ಯಪ್ರದೇಶದ ಬಾರ್ಗಡ್, ಬಿಹಾರ, ಹರಿಯಾಣ ಮತ್ತು ಒಡಿಶಾದ ಪೀಪಲ್, ಕೇರಳ ಮತ್ತು ತಮಿಳುನಾಡಿನ ತೆಂಗಿನ ಮರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಹೊಲ್ಲಾಂಗ್, ಚಂಡೀಘಡ ಮತ್ತು ಜಾರ್ಖಂಡ್ ನ ಸಾಲ್ ಮರಗಳು ಸೇರಿದಂತೆ 28 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳ 24 ತಳಿಯ ಮರಗಳು ವ್ಯಾಟಿಕಾ ಪ್ರದರ್ಶನದಲ್ಲಿವೆ.
ಕರ್ನಾಟಕದ ಚಂದನ್, ತ್ರಿಪುರಾದಿಂದ ಗಂಧದ ಮರ, ಲಕ್ಷದೀಪ್ವದ ಬ್ರೇಡ್ ರೂಟ್, ಪಶ್ಚಿಮ ಬಂಗಾಳದ ಅಲೆಸ್ಟೋನಿಯಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವಿಪದ ಪ್ರಸಿದ್ಧ ಪುಡ್ಡೋಕು ಮರಗಳು, ಆಂಧ್ರಪ್ರದೇಶದ ನೀಮ್ ಮರಗಳು ಇಲ್ಲಿರುವುದಾಗಿ ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


