ದೇಶ

ಭಾರತದಲ್ಲಿ ಕೊರೋನಾ ಇಳಿಕೆ: 24 ಗಂಟೆಗಳಲ್ಲಿ 70,421 ಹೊಸ ಕೇಸು ಪತ್ತೆ; 3,921 ಮಂದಿ ಸಾವು 

ದೇಶದಾದ್ಯಂತ ಸೋಮವಾರ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಸುಮಾರು 10 ಸಾವಿರದಷ್ಟು ಕಡಿಮೆಯಾಗಿದೆ. ನಿನ್ನೆ ಬೆಳಗ್ಗೆ ಹೊತ್ತಿಗೆ ದೇಶದಲ್ಲಿ 80 ಸಾವಿರದ 834 ಮಂದಿಗೆ ಇದ್ದ ಸೋಂಕಿನ ಸಂಖ್ಯೆ ಸೋಮವಾರ ಬೆಳಗ್ಗೆ 70 ಸಾವಿರದ 421ಕ್ಕೆ ಇಳಿಕೆಯಾಗಿದೆ.

ಭಾರತದಲ್ಲಿ ಕೊರೋನಾ ಇಳಿಕೆ: 24 ಗಂಟೆಗಳಲ್ಲಿ 70,421 ಹೊಸ ಕೇಸು ಪತ್ತೆ; 3,921 ಮಂದಿ ಸಾವು 
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ದೇಶದಾದ್ಯಂತ ಸೋಮವಾರ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಸುಮಾರು 10 ಸಾವಿರದಷ್ಟು ಕಡಿಮೆಯಾಗಿದೆ. ನಿನ್ನೆ ಬೆಳಗ್ಗೆ ಹೊತ್ತಿಗೆ ದೇಶದಲ್ಲಿ 80 ಸಾವಿರದ 834 ಮಂದಿಗೆ ಇದ್ದ ಸೋಂಕಿನ ಸಂಖ್ಯೆ ಸೋಮವಾರ ಬೆಳಗ್ಗೆ 70 ಸಾವಿರದ 421ಕ್ಕೆ ಇಳಿಕೆಯಾಗಿದೆ.

ಕಳೆದ 72 ದಿನಗಳಲ್ಲಿಯೇ ಸೋಂಕಿನ ಪ್ರಮಾಣ ಈ ಮಟ್ಟಕ್ಕೆ ಇಳಿದಿರುವುದು ಕೊರೋನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದ ದೇಶಕ್ಕೆ ಕೊಂಚ ಸಮಾಧಾನವಾದಂತಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 3 ಸಾವಿರದ 921 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿಯ 95 ಲಕ್ಷದ 10 ಸಾವಿರದ 410ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3 ಲಕ್ಷದ 74 ಸಾವಿರದ 305ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ನಡುವಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 9 ಲಕ್ಷದ 73 ಸಾವಿರದ 158ಕ್ಕೆ ಇಳಿಕೆಯಾಗಿದೆ.

ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 14 ಲಕ್ಷದ 92 ಸಾವಿರದ 152 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಇದುವರೆಗೆ 37,62,24,626 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.