ಉಚಿತ ಲಸಿಕೆ ಅಭಿಯಾನ: ಸರ್ಕಾರಕ್ಕೆ ಉಂಟಾಗುವ ಖರ್ಚು ಎಷ್ಟು?: ಇಲ್ಲಿದೆ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿಯನ್ನು ಘೋಷಿಸಿದ್ದರು. ಹೊಸ ಲಸಿಕೆ ನೀತಿಯಿಂದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಸಿಗಲಿದೆ. ಆದರೆ ಇದಕ್ಕೆ ಸರ್ಕಾರಕ್ಕೆ ತಗುಲುವ ಎಷ್ಟು ಗೊತ್ತೇ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿಯನ್ನು ಘೋಷಿಸಿದ್ದರು. ಹೊಸ ಲಸಿಕೆ ನೀತಿಯಿಂದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಸಿಗಲಿದೆ. ಆದರೆ ಇದಕ್ಕೆ ಸರ್ಕಾರಕ್ಕೆ ತಗುಲುವ ಎಷ್ಟು ಗೊತ್ತೇ?
ಲಸಿಕೆ ಹಾಗೂ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡುವುದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ 1.45 ಲಕ್ಷ ಕೋಟಿಯಷ್ಟು ಹಣವನ್ನು ಖರ್ಚು ಮಾಡಲಿದೆ.
ಎಲ್ಲಾ ವಯಸ್ಕರಿಗೆ ಉಚಿತವಾಗಿ ಲಸಿಕೆ ನೀಡುವುದಕ್ಕಾಗಿ 45,000 ಕೋಟಿಯಿಂದ 50,000 ಕೋಟಿ ರೂಪಾಯಿಗಳ ವರೆಗೆ ಖರ್ಚು ಮಾಡಲಿದೆ. ಇದು ಸರ್ಕಾರದ 35,000 ಕೋಟಿ ರೂಪಾಯಿಗಳ ಅಂದಾಜಿಗಿಂತಲೂ ಹೆಚ್ಚಿದೆ.
ನವೆಂಬರ್ ತಿಂಗಳವರೆಗೂ 80 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳೂ 5 ಕೆ.ಜಿಯಷ್ಟು ಗೋಧಿ ಅಥವಾ ಅಕ್ಕಿ ಹಾಗೂ 1 ಕೆ.ಜಿಯಷ್ಟು ದ್ವಿದಳ ಧಾನ್ಯಗಳನ್ನು ನೀಡುವುದಕ್ಕೆ ಸರ್ಕಾರ 1.1 ಲಕ್ಷ ಕೋಟಿಯಿಂದ 1.3 ಲಕ್ಷ ಕೋಟಿ ರೂಪಾಯಿಗಳ ಖರ್ಚಾಗಲಿದೆ. ಒಟ್ಟಾರೆ 1.45 ಲಕ್ಷ ಖರ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


