ರೈಲು ಪ್ರಯಾಣಿಕರ ಗಮನಕ್ಕೆ: ಹಲವು ರೈಲುಗಳು ರದ್ದು, ಇನ್ನೂ ಕೆಲವು ರೈಲುಗಳ ಪರಿಷ್ಕೃತ ವೇಳಾಪಟ್ಟಿ ಹೀಗಿದೆ..
ಭಾರತೀಯ ರೈಲ್ವೆಯ ಹಲವು ರೈಲುಗಳು ರದ್ದಾಗಿದ್ದು ಇನ್ನೂ ಕೆಲವು ರೈಲುಗಳ ವೇಳಾಪಟ್ಟಿ ಪರಿಷ್ಕೃತಗೊಂಡಿವೆ.

ನವದೆಹಲಿ: ಭಾರತೀಯ ರೈಲ್ವೆಯ ಹಲವು ರೈಲುಗಳು ರದ್ದಾಗಿದ್ದು ಇನ್ನೂ ಕೆಲವು ರೈಲುಗಳ ವೇಳಾಪಟ್ಟಿ ಪರಿಷ್ಕೃತಗೊಂಡಿವೆ.
ಉತ್ತರ ರೈಲ್ವೆ ಈ ಬಗ್ಗೆ ಮಾಹಿತಿ ಪ್ರಕಟಿಸಿದ್ದು, ಅಂಬಾಲ ವಿಭಾಗದ ರೈಲ್ವೆ ಸರ್ಹಿಂದ್ ಸ್ಟೇಷನ್ ನ ಇಂಟರ್ ಲಾಕಿಂಗ್ ಅಲ್ಲದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಹಲವು ರೈಲುಗಳ ವೇಳಾಪಟ್ಟಿ ಬದಲಾಗಿದೆ.
ಪಿಲ್ಖಾನಿ-ಸನೇಹ್ವಾಲ್ ನ ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಿಎಫ್ಸಿಸಿಐಎಲ್) ಕಾಮಗಾರಿಗೆ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಕಾಮಗಾರಿ ನಡೆಯಲಿದೆ.

ಈ ಕಾಮಗಾರಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಜೂ.30 ವರೆಗೂ ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಿರಲಿದೆ. ಈ ಪೈಕಿ ಕೆಲವು ರೈಲು ಮಾರ್ಗಗಳಲ್ಲಿ ರೈಲು ಸಂಚಾರ ಪೂರ್ಣ ಸ್ಥಗಿತಗೊಂಡರೆ ಇನ್ನೂ ಕೆಲವು ಭಾಗಶಃ ರದ್ದಾಗಲಿದೆ. ಮತ್ತೂ ಕೆಲವು ರೈಲುಗಳ ವೇಳಾಪಟ್ಟಿ ವ್ಯತ್ಯಯವಾಗಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ರೈಲುಗಳನ್ನು ಏಪ್ರಿಲ್ ತಿಂಗಳಿನಿಂದ ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಎರಡನೆ ಅಲೆಯಲ್ಲಿ 100 ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


