ದೇಶ

ವಿವಾಹ ಸಮಯದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರ ಬೆದರಿಕೆ: ಪೊಲೀಸರ ರಕ್ಷಣೆ ಕೋರಿದ ವರನ ಕುಟುಂಬ!

ಮದುವೆ ಸಂದರ್ಭದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಉತ್ತರ ಪ್ರದೇಶದಲ್ಲಿ ದಲಿತ ವ್ಯಕ್ತಿಯೊಬ್ಬರು ಪೊಲೀಸರಿಗೆ ಕೋರಿದ್ದಾರೆ

ವಿವಾಹ ಸಮಯದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರ ಬೆದರಿಕೆ: ಪೊಲೀಸರ ರಕ್ಷಣೆ ಕೋರಿದ ವರನ ಕುಟುಂಬ!
ಸಾಂದರ್ಭಿಕ ಚಿತ್ರ
Published On :

ಮಹೋಬಾ: ಮದುವೆ ಸಂದರ್ಭದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಉತ್ತರ ಪ್ರದೇಶದಲ್ಲಿ ದಲಿತ ವ್ಯಕ್ತಿಯೊಬ್ಬರು ಪೊಲೀಸರಿಗೆ ಕೋರಿದ್ದಾರೆ.

ಈ ಸಂಬಂದ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ,  ಆದರೆ ಕುದುರೆ ಸವಾರಿ ಮಾಡುವುದರಿಂದ ಗ್ರಾಮದಲ್ಲಿ ಯಾರಿಗೆ ತೊಂದರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದರೇ ಕೊಲ್ಲುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ ಎಂದು ವರ ಅಲಕ್ ರಾಮ್ ಹೇಳಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ, ನಮ್ಮ ಹಳ್ಳಿಯಲ್ಲಿ ಹಳೆಯ ಸಂಪ್ರದಾಯಗಳ ಪ್ರಕಾರ ಮದುವೆಗಳು ನಡೆಯುತ್ತಿವೆ. ನನ್ನ ಮದುವೆ ಮೆರವಣಿಗೆಗಾಗಿ ನಾನು ಕುದುರೆ ಸವಾರಿ ಮಾಡಲು ಬಯಸುತ್ತೇನೆ ಆದರೆ ಇತರ ಸಮುದಾಯಗಳಿಂದ ಬಂದ ಕೆಲವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಮ್ ಹೇಳಿದರು.

ನನ್ನ ಮಗನ ಮದುವೆ ಜೂನ್ 18 ರಂದು ನಡೆಯಲಿದ್ದು, ಈ ವೇಳೆ ಕುದುರೆ ಸವಾರಿ ಮಾಡಿದರೆ ಗ್ರಾಮಸ್ಥರು ಕೊಲ್ಲುವ ಬೆದರಿಕೆ ಹಾಕಿರುವುದರಿಂದ ಪೊಲೀಸರ ರಕ್ಷಣೆ ಕೋರುತ್ತಿರುವುದಾಗಿ ರಾಮ್ ತಂದೆ ಗಯಾದಿನ್ ತಿಳಿಸಿದ್ದಾರೆ. ವರನ ಕುಟುಂಬಕ್ಕೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಪಕ್ಷದ ಇಬ್ಬರ ನಿಯೋಗ ಕಳಿಸಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.