ಇಂದಿನಿಂದ ಮಹಾರಾಷ್ಟ್ರದ 36 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಲಾಕ್ಡೌನ್ ಮುಕ್ತ!
ಪಾಸಿಟಿವ್ ದರ ಮತ್ತು ವೆಂಟಿಲೇಟರ್ ಹಾಸಿಗೆಯ ಬಳಕೆ ಗಣನೀಯವಾಗಿ ಕುಸಿದಿರುವ ಹಿನ್ನೆಯಲ್ಲಿ ಮಹಾರಾಷ್ಟ್ರದ 36 ಜಿಲ್ಲೆಗಳ ಪೈಕಿ 18ರಲ್ಲಿ ಕೊರೋನಾ ಪ್ರೇರಿತ ನಿರ್ಬಂಧಗಳನ್ನು ಶುಕ್ರವಾರದಿಂದ ತೆಗೆದು ಹಾಕಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಮುಂಬೈ: ಪಾಸಿಟಿವ್ ದರ ಮತ್ತು ವೆಂಟಿಲೇಟರ್ ಹಾಸಿಗೆಯ ಬಳಕೆ ಗಣನೀಯವಾಗಿ ಕುಸಿದಿರುವ ಹಿನ್ನೆಯಲ್ಲಿ ಮಹಾರಾಷ್ಟ್ರದ 36 ಜಿಲ್ಲೆಗಳ ಪೈಕಿ 18ರಲ್ಲಿ ಕೊರೋನಾ ಪ್ರೇರಿತ ನಿರ್ಬಂಧಗಳನ್ನು ಶುಕ್ರವಾರದಿಂದ ತೆಗೆದು ಹಾಕಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಗುರುವಾರ ಇಲ್ಲಿ ನಡೆದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ ವಿಪತ್ತು ನಿರ್ವಹಣಾ ಸಚಿವ ವಿಜಯ್ ವಾಡೆಟ್ಟಿವಾರ್ ಈ ಘೋಷಣೆ ಮಾಡಿದ್ದಾರೆ.
ಕೊರೋನಾ ಎರಡನೇ ಅಲೆ ತೀವ್ರಗೊಂಡಾಗ ಈ ವರ್ಷದ ಏಪ್ರಿಲ್ನಲ್ಲಿ ವಿಧಿಸಲಾದ ಲಾಕ್ಡೌನ್ ತರಹದ ನಿರ್ಬಂಧಗಳನ್ನು 18 ಜಿಲ್ಲೆಗಳಲ್ಲಿ ತೆಗೆದುಹಾಕಲಾಗುವುದು. ಅಲ್ಲಿ ಸಕಾರಾತ್ಮಕ ಪ್ರಮಾಣವು ಶೇಕಡ 5ರಷ್ಟು ಅಥವಾ ಅದಕ್ಕಿಂತ ಕಡಿಮೆ ಆಗಿದೆ. ಅಲ್ಲದೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆಗಳ ವಾಸವು 25 ಪ್ರತಿಶತಕ್ಕಿಂತ ಕಡಿಮೆಯಿದೆ ಎಂದು ಹೇಳಿದರು.
ಹೀಗಾಗಿ ಔರಂಗಾಬಾದ್, ಭಂಡಾರ, ಬುಲ್ಖಾನಾ, ಚಂದ್ರಪುರ, ಧುಲೆ, ಗಡ್ಚಿರೋಲಿ, ಗೊಂಡಿಯಾ, ಜಲ್ಗಾಂವ್, ಜಲ್ನಾ, ಲಾತೂರ್, ನಾಗ್ಪುರ, ನಾಂದೇಡ್, ನಾಸಿಕ್, ಯವತ್ಮಾಲ್, ವಾಶಿಮ್, ವಾರ್ಧಾ, ಪರಭಾನಿ ಮತ್ತು ಥಾಣೆ. ಈ ಜಿಲ್ಲೆಗಳಲ್ಲಿ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದರು.
ಮುಂಬಯಿಯಲ್ಲಿನ ನಿರ್ಬಂಧಗಳನ್ನು ಭಾಗಶಃ ಸಡಿಲಗೊಳಿಸಲಾಗುವುದು. ಆದರೆ ಸ್ಥಳೀಯ ರೈಲುಗಳ ಪ್ರಯಾಣ, ರಾಜ್ಯ ರಾಜಧಾನಿಯ ಜೀವಸೆಲೆ ಈಗಿನಂತೆ ಸಾರ್ವಜನಿಕರಿಗೆ ಮುಕ್ತವಾಗುವುದಿಲ್ಲ ಎಂದು ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


