ಮಲ್ಯಗೆ ಸೇರಿದ 5,646 ಕೋಟಿ ಮೊತ್ತದ ಆಸ್ತಿ, ಷೇರು ಮಾರಾಟ ಮಾಡಲು ಬ್ಯಾಂಕ್ ಗಳಿಗೆ ಅವಕಾಶ!
ಕಿಂಗ್ ಫಿಶರ್ ಏರ್ ಲೈನ್ಸ್ ವೈಫಲ್ಯದೊಂದಿಗೆ ಸಾಲ ತೀರಿಸಲಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಕೆಲ ರಿಯಲ್ ಎಸ್ಟೇಟ್ ಪ್ರಾಪರ್ಟಿ ಹಾಗೂ ಷೇರುಗಳನ್ನು ಎಸ್ ಬಿಐ ನೇತೃತ್ವದ ಬ್ಯಾಂಕ್ ಗಳು ಇದೀಗ ನ್ಯಾಯಾಲಯದ ಆದೇಶದೊಂದಿಗೆ ಮಾರಾಟ ಮಾಡಬಹುದಾಗಿದೆ.

ನವದೆಹಲಿ: ಕಿಂಗ್ ಫಿಶರ್ ಏರ್ ಲೈನ್ಸ್ ವೈಫಲ್ಯದೊಂದಿಗೆ ಸಾಲ ತೀರಿಸಲಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಕೆಲ ರಿಯಲ್ ಎಸ್ಟೇಟ್ ಪ್ರಾಪರ್ಟಿ ಹಾಗೂ ಷೇರುಗಳನ್ನು ಎಸ್ ಬಿಐ ನೇತೃತ್ವದ ಬ್ಯಾಂಕ್ ಗಳು ಇದೀಗ ನ್ಯಾಯಾಲಯದ ಆದೇಶದೊಂದಿಗೆ ಮಾರಾಟ ಮಾಡಬಹುದಾಗಿದೆ.
ಎಸ್ ಬಿಐ ನೇತೃತ್ವದಲ್ಲಿನ 11 ಬ್ಯಾಂಕ್ ಗಳ ಒಕ್ಕೂಟ ಮಲ್ಯಗೆ ಸಾಲ ನೀಡಿದ್ದು, ಜಾರಿ ನಿರ್ದೇಶನಾಲಯದಿಂದ ವಶಕ್ಕೆ ಪಡೆದಿರುವ ಮಲ್ಯಗೆ ಸೇರಿದ ಆಸ್ತಿಯನ್ನು ಮರು ಸ್ಥಾಪಿಸುವಂತೆ ಕೋರಿ ಅಕ್ರಮ ಹಣ ವರ್ಗಾಯಣೆ ಕಾಯ್ದೆಯ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದವು. ವಿಶೇಷ ಪಿಎಂಎಲ್ ಎ ನ್ಯಾಯಾಲಯ ಗುರುವಾರ, 5,646 .54 ಕೋಟಿ ಮೊತ್ತದ ಪ್ರಾಪರ್ಟಿಯನ್ನು ಬ್ಯಾಂಕ್ ಗಳಿಗೆ ಕೊಡಲು ಅವಕಾಶ ಕಲ್ಪಿಸಿದೆ.
2002ರ ಎಸ್ ಎಆರ್ ಎಫ್ ಎಇಎಸ್ ಐ ಕಾಯ್ದೆ ಮಾರ್ಗಸೂಚಿಯಂತೆ ವಸೂಲಿ ಪ್ರಕ್ರಿಯೆ ನಡೆಯಲಿದೆ. ಆಸ್ತಿಗಳ ಹರಾಜು ಅಥವಾ ಮಾರಾಟವನ್ನು ಸರಿಯಾದ ಸಮಯದಲ್ಲಿ ಮಾರ್ಗಸೂಚಿಗಳ ಪ್ರಕಾರ ಮಾಡಲಾಗುತ್ತದೆ ಎಂದು ಎಸ್ ಬಿಐನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಸ್ ಬಿಐಗೆ ನೀಡಿದ್ದ 6,900 ಕೋಟಿ ಮೂಲ ಸಾಲದಲ್ಲಿ 1600 ಕೋಟಿ ಬಾಕಿಯಿದೆ.ಉಳಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕ್ರಮವಾಗಿ 800 ಐಡಿಬಿಐ 800, ಬ್ಯಾಂಕ್ ಆಫ್ ಇಂಡಿಯಾ 650, ಬ್ಯಾಂಕ್ ಆಫ್ ಬರೋಡಾ 550, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 410 ಕೋಟಿ ರೂ. ಸಾಲ ಬಾಕಿಯಿದೆ.
ಕಳೆದ ವರ್ಷ ಬಾಗಿಲು ಮುಚ್ಚಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಂಬಂಧಿಸಿದಂತೆ 9 ಸಾವಿರ ಕೋಟಿ ರೂ. ಮೊತ್ತದ ವಂಚನೆ ಪ್ರಕರಣ ವಿಜಯ್ ಮಲ್ಯ ಅವರ ಮೇಲಿದೆ. ಭಾರತಕ್ಕೆ ಹಸ್ತಾಂತರಿಸದಂತೆ ಇಂಗ್ಲೆಂಡ್ ಕೋರ್ಟಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಪ್ರಮುಖ ಭಾರತೀಯ ಬ್ಯಾಂಕ್ ಗಳಿಗೆ ಶೇ.100 ರಷ್ಟು ಸಾರ್ವಜನಿಕ ಹಣವನ್ನು ಹಿಂತಿರುಗಿಸುತ್ತೇನೆ. ಇದನ್ನು ಸರ್ಕಾರ ಒಪ್ಪಿಕೊಳ್ಳುವಂತೆ ವಿಜಯ್ ಮಲ್ಯ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


