ಹಬ್ಬದ ಸಂದರ್ಭದಲ್ಲಿ ಕೊರೋನಾ ಮರೆಯದಿರಿ, ಮಾಸ್ಕ್ ಧರಿಸಿ ನಿಯಮಗಳ ಪಾಲಿಸಿ: ಪ್ರಧಾನಿ ಮೋದಿ
ಕೋವಿಡ್ ನಮ್ಮ ನಡುವೆಯೇ ಇದ್ದು, ಹಬ್ಬದ ಸಂಭ್ರಮದಲ್ಲಿ ಜನರು ಕೊರೋನಾ ಮರೆಯಬಾರದು. ಮಾಸ್ಕ್ ಧರಿಸಿ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

ನವದೆಹಲಿ: ಕೋವಿಡ್ ನಮ್ಮ ನಡುವೆಯೇ ಇದ್ದು, ಹಬ್ಬದ ಸಂಭ್ರಮದಲ್ಲಿ ಜನರು ಕೊರೋನಾ ಮರೆಯಬಾರದು. ಮಾಸ್ಕ್ ಧರಿಸಿ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಅವರು, ಮುಂದಿನ ಎಲ್ಲಾ ಹಬ್ಬಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಈಗಲೂ ಕೋವಿಡ್ ನಮ್ಮ ನಡುವೆಯೇ ಇದೆ. ಹಬ್ಬದ ಸಂಭ್ರಮದಲ್ಲಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಮರೆಯಬಾರದು ಎಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕು ಎಂದು ಕರೆ ನೀಡಿದ್ದಾರೆ.
ಬಳಿಕ ಲಸಿಕೆ ಕುರಿತು ಮಾತನಾಡಿದ ಅವರು, ಜನರು ಕೋವಿಡ್ ಲಸಿಕೆಯ ಭಯದಿಂದ ಹೊರಬರಬೇಕು. ಲಸಿಕೆ ಪಡೆದ ಬಳಿಕ ಜ್ವರ ಬರಬಹುದು. ಆದರೆ ಇದು ಕೆಲವು ಗಂಟೆಗಳಿಗೆ ಮಾತ್ರ. ಲಸಿಕೆ ಪಡೆಯುವುದನ್ನು ನಿರಾಕರಿಸಿವುದು ಅದಕ್ಕಿಂತ ಅಪಾಯಕಾರಿ. ಲಸಿಕೆ ಪಡೆಯದೇ ನೀವು ನಿಮ್ಮನ್ನು ಮಾತ್ರವಲ್ಲದೆ ನಿಮ್ಮ ಕುಟುಂಬ ಮತ್ತು ಊರಿನವರನ್ನೂ ಅಪಾಯಕ್ಕೆ ಸಿಲುಕಿಸುತ್ತೀರಿ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


