ಭಾರತಕ್ಕೆ ಮತ್ತೆ 3 ರಾಫೆಲ್ ಆಗಮನ; ಒಟ್ಟು ಸಂಖ್ಯೆ 24ಕ್ಕೆ ಏರಿಕೆ
ಫ್ರಾನ್ಸ್ ನಿಂದ ಭಾರತಕ್ಕೆ 7 ನೇ ಬ್ಯಾಚ್ ನಲ್ಲಿ ಮೂರು ರಾಫೆಲ್ ಯುದ್ಧವಿಮಾನಗಳು ಜುಲೈ 21 ರಂದು ಆಗಮಿಸಿವೆ. ಐಎಎಫ್ ನಲ್ಲಿ ಈಗ ರಾಫೆಲ್ ಜೆಟ್ ಗಳ ಒಟ್ಟು ಸಂಖ್ಯೆ 24 ಕ್ಕೆ ಏರಿಕೆಯಾಗಿದ್ದು ವಾಯುಪಡೆಗೆ ಹೆಚ್ಚಿನ ಬಲ ಬಂದಿದೆ.

ನವದೆಹಲಿ: ಫ್ರಾನ್ಸ್ ನಿಂದ ಭಾರತಕ್ಕೆ 7 ನೇ ಬ್ಯಾಚ್ ನಲ್ಲಿ ಮೂರು ರಾಫೆಲ್ ಯುದ್ಧವಿಮಾನಗಳು ಜುಲೈ 21 ರಂದು ಆಗಮಿಸಿವೆ. ಐಎಎಫ್ ನಲ್ಲಿ ಈಗ ರಾಫೆಲ್ ಜೆಟ್ ಗಳ ಒಟ್ಟು ಸಂಖ್ಯೆ 24 ಕ್ಕೆ ಏರಿಕೆಯಾಗಿದ್ದು ವಾಯುಪಡೆಗೆ ಹೆಚ್ಚಿನ ಬಲ ಬಂದಿದೆ.
ಹೊಸ ಬ್ಯಾಚ್ ನ ರಾಫೆಲ್ ಜೆಟ್ ಗಳು ಐಎಎಫ್ ನ ರಾಫೆಲ್ ಜೆಟ್ ನ ಎರಡನೇ ಸ್ಕ್ವಾರ್ಡನ್ ನ ಭಾಗವಾಗಲಿದೆ. ಯುನೈಟೆಡ್ ಅರಬ್ ಎಮಿರೈಟ್ಸ್ ನ ಏರ್ ಫೋರ್ಸ್ ಗಳ ಮೂಲಕ ಮಾರ್ಗ ಮಧ್ಯದಲ್ಲೇ ಇಂಧನವನ್ನು ರಾಫೆಲ್ ಜೆಟ್ ಗೆ ತುಂಬಿಸಲಾಯಿತು.
ಫ್ರಾನ್ಸ್ ನ ಇಸ್ಟ್ರೆಸ್ ಏರ್ಬೇಸ್ ನಿಂದ ಕೆಲವೇ ಸಮಯದ ಹಿಂದಷ್ಟೇ ರಾಫೆಲ್ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿದವು. ಯುಎಇ ವಾಯುಪಡೆಯ ಸಹಾಕರವನ್ನು ಅಭಿನಂದಿಸುತ್ತೆವೆ ಎಂದು ಐಎಎಫ್ ಟ್ವೀಟ್ ನಲ್ಲಿ ಹೇಳಿದೆ. ಹೊಸ ಸ್ಕ್ವಾರ್ಡನ್ ನ ರಾಫೆಲ್ ಜೆಟ್ ಗಳನ್ನು ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆಯಲ್ಲಿ ಇರಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


