ಆಗಸ್ಟ್ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಯೋಧ್ಯೆಯ ರಾಮ ಲಲ್ಲಾ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಮುಂದಿನ ತಿಂಗಳು ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಲಕ್ನೋ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಯೋಧ್ಯೆಯ ರಾಮ ಲಲ್ಲಾ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಮುಂದಿನ ತಿಂಗಳು ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅಲ್ಲದೆ, ಗೋರಕ್ ಪುರದಲ್ಲಿ ಆಯುಷ್ ವಿಶ್ವವಿದ್ಯಾಲಯಕ್ಕೆ ಅಡಿಗಲ್ಲು ಇರಿಸಲಿರುವ ಕಾರ್ಯಕ್ರಮ ಸಹ ನಿಗಧಿಯಾಗಿದೆ ಎಂದು ಅಧಿಕಾರಿ ಮೂಲಗಳು ಹೇಳಿವೆ.
ಪ್ರಾಥಮಿಕ ಯೋಜನೆಯಂತೆ ರಾಷ್ಟ್ರಪತಿಗಳು ಲಕ್ನೋದಿಂದ ವಿಶೇಷ ರೈಲು ಮೂಲಕ ಆಯೋಧ್ಯೆ ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರ ಮೂರನೇ ವಿಶೇಷ ರೈಲು ಪ್ರಯಾಣ ಇದಾಗಲಿದ್ದು, ಈ ಮೊದಲು ದೆಹಲಿಯಿಂದ ಕಾನ್ಫುರ, ಎರಡನೆಯದಾಗಿ ಕಾನ್ಪುರದಿಂದ ಲಕ್ನೋಗೆ ವಿಶೇಷ ರೈಲಿನಲ್ಲಿ ಸಂಚರಿಸಿದ್ದರು.
ಆಗಸ್ಟ್ 27 ರಿಂದ 29ರವರೆಗೆ ರಾಷ್ಟ್ರಪತಿಗಳ ಉತ್ತರ ಪ್ರದೇಶ ಕಾರ್ಯಕ್ರಮ ನಿಗದಿಯಾಗಿದೆ. ಆಗಸ್ಟ್ 27 ರಂದು ರಾಷ್ಟ್ರಪತಿ ವಿಶೇಷ ವಿಮಾನದ ಮೂಲಕ ಅಮೌಸಿ ವಿಮಾನ ನಿಲ್ದಾಣ ತಲುಪಲಿದ್ದು, ಆಗಸ್ಟ್ 28ರಂದು ವಿಶೇಷ ವಿಮಾನದಲ್ಲಿ ಗೋರಕ್ ಪುರಕ್ಕೆ ತೆರಳಿ ಆಯುಷ್ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ, ಗುರು ಗೋರಕ್ ನಾಥ್ ವಿಶ್ವವಿದ್ಯಾಲಯ ಆಸ್ಪತ್ರೆ ನಿರ್ಮಾಣವನ್ನು ಉದ್ಘಾಟಿಸಲಿದ್ದಾರೆ.
ನಂತರ ಅದೇ ದಿನ ಲಕ್ನೋ ಹಿಂದಿರುಗಲಿದ್ದಾರೆ. ಆಗಸ್ಟ್ 29ರಂದು ವಿಶೇಷ ರೈಲಿನಲ್ಲಿ ಆಯೋಧ್ಯೆಗೆ ತೆರಳಿಲಿದ್ದು ಅಲ್ಲಿ ರಾಮ ಲಲ್ಲಾ ಹಾಗೂ ಹನುಮಗ್ರಾಹಿ ದೇಗಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದನಂತರ ಅಂದೇ ಲಕ್ನೋಗೆ ವಾಪಸ್ಸಾಗಲಿದ್ದು, ರಾಷ್ಟ್ರಪತಿ ಆಗಸ್ಟ್ 30ರಂದು ದೆಹಲಿಗೆ ಹಿಂದಿರುಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


