ಕೊರೋನಾ ಕಲಿಸಿದ ಪಾಠಗಳು: ಕೊನೆಗೂ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದೇ ಆದ್ಯತೆ!
ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಈ ದೇಶಕ್ಕೆ ಪ್ರಚೋದನೆ ಅಗತ್ಯವಿದ್ದಂತಹ ಸಂದರ್ಭದಲ್ಲಿ ಸಾಂಕ್ರಾಮಿಕವು ಹಲವಾರು ನ್ಯೂನತೆಗಳನ್ನು ಬಹಿರಂಗಪಡಿಸಿದೆ.

ನವದೆಹಲಿ: ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಈ ದೇಶಕ್ಕೆ ಪ್ರಚೋದನೆ ಅಗತ್ಯವಿದ್ದಂತಹ ಸಂದರ್ಭದಲ್ಲಿ ಸಾಂಕ್ರಾಮಿಕವು ಹಲವಾರು ನ್ಯೂನತೆಗಳನ್ನು ಬಹಿರಂಗಪಡಿಸಿದೆ.
ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೊರತೆ, ವೆಂಟಿಲೇಟರ್, ಇಸಿಎಂಒನಂತಹ ವಿಶೇಷ ಸಲಕರಣೆಗಳು ಮತ್ತು ಸಾಕಷ್ಟು ವೈದ್ಯಕೀಯ ಸಿಬ್ಬಂದಿ ಕೊರತೆಯಂತಹ ಸವಾಲುಗಳು ಕೋವಿಡ್-19 ಎರಡನೇ ಅವಧಿಯಲ್ಲಿ ಮುಂಚೂಣಿಯಲ್ಲಿರುವುದರೊಂದಿಗೆ, ಆರೋಗ್ಯ ಕ್ಷೇತ್ರದ ಮಿತಿಯನ್ನು ಅಲ್ಲಗಳೆಯುವಂತಿಲ್ಲ.
ದೇಶದ ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳು, ತುರ್ತು ನಿಗಾ ಹಾಸಿಗೆಗಳು, ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಕರ್ತವ್ಯಕ್ಕೆ ಹಾಜರುಪಡಿಸುವುದು ಮತ್ತಿತರ ಪ್ರಯತ್ನಗಳ ಮೂಲಕ ಸ್ವಲ್ಪ ಮಂಕಾಗುವಿಕೆಯಿಂದ ತಪ್ಪಿಸಿಕೊಂಡಂತಾಗಿದೆ.
ಆದಾಗ್ಯೂ, ಒಟ್ಟಾರೇಯಾಗಿ ಆರೋಗ್ಯದ ಗುಣಮಟ್ಟ ಸುಧಾರಿಸುವುದಕ್ಕೆ ಸಮಯಕ್ಕೆ ಅನುಗುಣವಾದ ಫಲಿತಾಂಶಗಳನ್ನು ಗುರಿಯಾಗಿಸುವ ಅವಶ್ಯಕತೆಯಿದೆ. ಉದಾಹರಣೆಗೆ ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ 100 ಬೆಡ್ ಗಳಿಂದ ಐದು ಆಸ್ಪತ್ರೆ ಬೆಡ್ ಗಳಿದ್ದರೆ ಭಾರತದಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ 8. 6 ವೈದ್ಯರು ಇರುತ್ತಾರೆ.
ಈ ನಿಟ್ಟಿನಲ್ಲಿ ಕಿರು ಅವಧಿಯ ತುರ್ತು ಪೂರ್ವ ಸಿದ್ಧತೆಯಾಗಿ ಮಕ್ಕಳ ಆರೈಕೆಗೆ ಒಂದು ವರ್ಷಕ್ಕೆ 23,220 ಕೋಟಿಯನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಕಡಿಮೆ ಸೇವೆ ಸಲ್ಲಿಸುತ್ತಿರುವ ಪ್ರದೇಶಗಳಿಗೆ 50,000 ಕೋಟಿ ರೂ. ಮೀಸಲಿಟಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿನ ವೆಚ್ಚ ಶೇ.14.9ಕ್ಕೆ ಹೆಚ್ಚಳವಾಗಿದೆ. ಆದರೆ, 2015ರ ಆರ್ಥಿಕ ವರ್ಷದಲ್ಲಿ 1,008 ರೂಪಾಯಿ ಇದ್ದ ತಲಾ ಖರ್ಚು 2020ರ ಆರ್ಥಿಕ ವರ್ಷದಲ್ಲಿ 1944 ರೂ.ಗೆ ಏರಿಕೆಯಾಗಿದೆ. ಬ್ರಿಕ್ಸ್ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಅಸಮರ್ಕವಾಗಿದೆ.
ಸಾಂಕ್ರಾಮಿಕ ರೋಗದ ಕಾರಣದಿಂದ ಆರೋಗ್ಯ ಕ್ಷೇತ್ರದಲ್ಲಿನ ಒಟ್ಟಾರೇ ಹಂಚಿಕೆಯು ಶೇ 1.4 ರಷ್ಟಿದೆ. ಕೋವಿಡ್-19 ವಿರುದ್ಧದ ಲಸಿಕೆ ಅಭಿಯಾನ ಮತ್ತು ಅಗತ್ಯವಿದ್ದಾಗ ಹೆಜ್ಜೆ ಹಾಕುವಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ಇದು ದೇಶದ ಒಟ್ಟು ಹಣದ 25 ಶೇಕಡಾವನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತದೆ.
ಮೂಲ ಬರಹ: ಸುಬ್ರಕಾಂತ್ ಪಾಂಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


