ಜಮ್ಮು-ಕಾಶ್ಮೀರದ ಡೀಲಿಮಿಟೇಷನ್ ಪ್ರಕ್ರಿಯೆಯಿಂದ ಹೊರಗುಳಿಯಲಿದ್ದೇವೆ: ಪಿಡಿಪಿ
ಗಡಿ ಮರು ವಿಂಗಡನೆ (ಡೀಲಿಮಿಟೇಷನ್) ಪ್ರಕ್ರಿಯೆಯಿಂದ ದೂರ ಉಳಿಯುವುದಕ್ಕೆ ಪಿಡಿಪಿ ನಿರ್ಧರಿಸಿದೆ.

ಶ್ರೀನಗರ: ಗಡಿ ಮರು ವಿಂಗಡನೆ (ಡೀಲಿಮಿಟೇಷನ್) ಪ್ರಕ್ರಿಯೆಯಿಂದ ದೂರ ಉಳಿಯುವುದಕ್ಕೆ ಪಿಡಿಪಿ ನಿರ್ಧರಿಸಿದೆ.
ಕೇಂದ್ರ ಸರ್ಕಾರ ಜನರ ಜೀವನವನ್ನು ಸುಗಮಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಡೀಲಿಮಿಟೇಷನ್ ನ ಫಲಿತಾಂಶ ಪೂರ್ವ ಯೋಜಿತವಾಗಿರಲಿದೆ ಆದ್ದರಿಂದ ಜಮ್ಮು-ಕಾಶ್ಮೀರದ ಡೀಲಿಮಿಟೇಷನ್ ಆಯೋಗವನ್ನು ಪಿಡಿಪಿ ಭೇಟಿ ಮಾಡುವುದಿಲ್ಲ ಎಂದು ಪಿಡಿಪಿ ಹೇಳಿದೆ.
"ಈ ಪ್ರಕ್ರಿಯೆಯಿಂದ ದೂರ ಉಳಿಯಲು ನಮ್ಮ ಪಕ್ಷ ನಿರ್ಧರಿಸಿದ್ದು, ಡೀಲಿಮಿಟೇಷನ್ ನ ಭಾಗವಾಗಿರುವುದಿಲ್ಲ, ಈ ಪ್ರಕ್ರಿಯೆಯ ಫಲಿತಾಂಶ ಪೂರ್ವ ಯೋಜಿತವಾಗಿದ್ದು, ಇದರಿಂದಾಗಿ ನಮ್ಮ ಜನರಿಗೆ ನೋವುಂಟಾಗಲಿದೆ ಎಂದು ಪಿಡಿಪಿ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಲೋನ್ ಹಂಜುರ ತಿಳಿಸಿದ್ದಾರೆ.
ಡೀಲಿಮಿಟೇಷನ್ ನ ಆಯೋಗದ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ರಂಜನ ಪ್ರಕಾಶ್ ದೇಸಾಯಿ ಅವರಿಗೆ ಹಂಜುರ ಪತ್ರ ಬರೆದಿದ್ದು, 2019 ರ ಆಗಸ್ಟ್ ತಿಂಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಾಂವಿಧಾನಿಕ ಬದಲಾವಣೆಗಳು ಅಕ್ರಮ ಹಾಗೂ ಅಸಾಂವಿಧಾನಿಕವಾಗಿವೆ ಎಂದು ಹೇಳಿದ್ದಾರೆ.
ಡೀಲಿಮಿಟೇಷನ್ ಆಯೋಗಕ್ಕೆ ಸಾಂವಿಧಾನಿಕ ಹಾಗೂ ಕಾನೂನಾತ್ಮಕವಾಗಿ ಜನಾದೇಶದ ಕೊರತೆ ಇದೆ, ಈ ಪ್ರಕ್ರಿಯೆಯ ಅಸ್ತಿತ್ವವೇ ಜಮ್ಮು-ಕಾಶ್ಮೀರದ ಜನತೆಯಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


