ಟ್ವಿಟರ್ ನಲ್ಲಿ ತಾಂತ್ರಿಕ ದೋಷ: ಲಾಗಿನ್ ಸಮಸ್ಯೆ, ಶೀಘ್ರವೇ ಸರಿಪಡಿಸುವುದಾಗಿ ಸಂಸ್ಥೆ ಹೇಳಿಕೆ
ದೇಶಾದ್ಯಂತ ಟ್ವಿಟರ್ ನಲ್ಲಿ ತಾಂತ್ರಿಕ ದೋಷ ಎದುರಾಗಿದ್ದು, ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ.

ನವದೆಹಲಿ: ದೇಶಾದ್ಯಂತ ಟ್ವಿಟರ್ ನಲ್ಲಿ ತಾಂತ್ರಿಕ ದೋಷ ಎದುರಾಗಿದ್ದು, ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ.
ಹೌದು..ಗುರುವಾರ ಬೆಳಿಗ್ಗೆ ಹಲವು ಬಳಕೆದಾರರು ಟ್ವಿಟರ್ ವೆಬ್ ಸೈಟ್ ಪ್ರವೇಶಿಸುವ ಸಮಸ್ಯೆಗಳನ್ನು ವರದಿ ಮಾಡಿದ್ದು, ಮೊಬೈಲ್ ಅಪ್ಲಿಕೇಶನ್ ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ, ಬಳಕೆದಾರರು ವೆಬ್ ಸೈಟ್ ಪ್ರವೇಶಿಸುವಾಗ ಸಮಸ್ಯೆಗಳನ್ನು ಎದುರಿಸಿದರು. ಬಳಕೆದಾರರು ಪ್ರತಿ ಬಾರಿ ಟ್ವಿಟರ್ ವೆಬ್ ಸೈಟ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, ಪರದೆಯ ಮೇಲೆ 'ಸಮ್ ಥಿಂಗ್ ಎರರ್ ' ಸಂದೇಶ ಬರುತ್ತಿತ್ತು ಎಂದು ವರದಿ ಮಾಡಿದ್ದಾರೆ.
ಈ ಕುರಿತಂತೆ ತಾಂತ್ರಿಕ ದೋಷ ಒಪ್ಪಿಕೊಂಡಿರುವ ಟ್ವಿಟರ್, ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ದೋಷ ಸರಿಪಡಿಸಲಾಗುತ್ತದೆ ಎಂದು ಟ್ವೀಟ್ ಮಾಡಿದೆ. ಟ್ವಿಟರ್ ತನ್ನ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದ್ದು, 'ಪ್ರೊಫೈಲ್ ಗಳ ಟ್ವೀಟ್ ಗಳು ವೆಬ್ ನಲ್ಲಿ ನಿಮ್ಮಲ್ಲಿ ಕೆಲವರಿಗೆ ಲೋಡ್ ಆಗಿರಲಿಕ್ಕಿಲ್ಲ ಮತ್ತು ನಾವು ಪ್ರಸ್ತುತ ಫಿಕ್ಸ್ ಮಾಡುತ್ತಿದ್ದೇವೆ. ನಮ್ಮೊಂದಿಗೆ ಇರುವುದಕ್ಕೆ ಧನ್ಯವಾದಗಳು!.' ಎಂದು ಬರೆದಿದ್ದಾರೆ.
ಡೌನ್ ಡಿಟೆಕ್ಟರ್ ವರದಿಯು 80 ಪ್ರತಿಶತ ಬಳಕೆದಾರರು ವಿಶೇಷವಾಗಿ ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ವೆಬ್ ಸೈಟ್ ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದೆ, ಆದರೆ 16 ಪ್ರತಿಶತ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಕೆದಾರರು ಅಪ್ಲಿಕೇಶನ್ ಅನ್ನು ಲೋಡ್ ಮಾಡಲು ಸಾಧ್ಯವಾಗಲಿಲ್ಲ ಮತ್ತು 8 ಪ್ರತಿಶತ ಐಒಎಸ್ ಬಳಕೆದಾರರು ಅಪ್ಲಿಕೇಶನ್ ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


