ಸ್ಪುಟ್ನಿಕ್-ಲೈಟ್ ಸಿಂಗಲ್ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನಿರಾಕರಣೆ!
ಸಿಂಗಲ್ ಡೋಸ್ ಕೋವಿಡ್ ಲಸಿಕೆ ಸ್ಪುಟ್ನಿಕ್ -ಲೈಟ್ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆಯನ್ನು ನಿರಾಕರಿಸಿದ್ದು, ದೇಶದಲ್ಲಿ ರಷ್ಯಾ ನಿರ್ಮಿತ ಲಸಿಕೆಯ ಮೂರನೇ ಹಂತದ ಪ್ರಯೋಗದ ಅಗತ್ಯವನ್ನು ತಳ್ಳಿ ಹಾಕಿದೆ.

ನವದೆಹಲಿ: ಸಿಂಗಲ್ ಡೋಸ್ ಕೋವಿಡ್ ಲಸಿಕೆ ಸ್ಪುಟ್ನಿಕ್ -ಲೈಟ್ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆಯನ್ನು ನಿರಾಕರಿಸಿದ್ದು, ದೇಶದಲ್ಲಿ ರಷ್ಯಾ ನಿರ್ಮಿತ ಲಸಿಕೆಯ ಮೂರನೇ ಹಂತದ ಪ್ರಯೋಗದ ಅಗತ್ಯವನ್ನು ತಳ್ಳಿ ಹಾಕಿದೆ.
ಜುಲೈ 30 ರಂದು ನಡೆದ ವಿಷಯ ತಜ್ಞರ ಸಮಿತಿ ಸಭೆಯ ಶಿಫಾರಸ್ಸಿನ ಪ್ರಕಾರ, ಸ್ಪುಟ್ನಿಕ್ -ಲೈಟ್ ಕೂಡಾ ಸ್ಪುಟ್ನಿಕ್ ವಿ ಅಂಶಗಳನ್ನು ಹೊಂದಿದ್ದು, ಸುರಕ್ಷಿತವಾಗಿದೆ ಎನ್ನಲಾಗಿದೆ. ಗುರುವಾರ ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಕೇಂದ್ರೀಯ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವೆಬ್ ಸೈಟ್ ನಲ್ಲಿ ಅಳವಡಿಸಲಾಗಿದೆ.
ಸ್ಪುಟ್ನಿಕ್ -ಲೈಟ್ ಲಸಿಕೆಯ ಮಾರುಕಟ್ಟೆಗೆ ಅನುಮತಿ ಕೋರಿ ಡಿಸಿಜಿಐಗೆ ಪ್ರಸ್ತಾವನೆ ಸಲ್ಲಿಸಿದ್ದ ಡಾ ರೆಡ್ಡೀ'ಸ್ ಲ್ಯಾಬೋರೇಟರೀಸ್, ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುವ ಪ್ರೋಟೋಕಾಲ್ ಅನ್ನು ಸಮಿತಿಯ ಮುಂದೆ ಮಂಡಿಸಿತ್ತು.
ಸ್ಪುಟ್ನಿಕ್ ವಿ (ಅಂದರೆ, ಸ್ಪುಟ್ನಿಕ್-ಲೈಟ್) ನ ಮೊದಲ-ಡೋಸ್ ಅಂಶ ಕುರಿತು ದೇಶದಲ್ಲಿ ಈಗಾಗಲೇ ಡಾ. ರೆಡ್ಡೀಸ್ ಲ್ಯಾಬೋರೆಟರಿ ನೀಡಿರುವ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಡೇಟಾವನ್ನು ಗಮನದಲ್ಲಿಟ್ಟುಕೊಂಡು, ಪ್ರತ್ಯೇಕ ಮೂರನೇ ಹಂತದ ಪ್ರಯೋಗ ಅಗತ್ಯವಿಲ್ಲ ಎಂದು ವಿಶೇಷ ತಜ್ಞರ ಸಮಿತಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


