ಹೈದರ್ ಪೋರಾ ಎನ್ ಕೌಂಟರ್: ಭದ್ರತಾಪಡೆಗಳಿಗೆ ಕ್ಲೀನ್ ಚಿಟ್
ಹೈದರ್ ಪೋರಾ ಎನ್ ಕೌಂಟರ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಜಮ್ಮು-ಕಾಶ್ಮೀರ ಪೊಲೀಸ್ ವಿಭಾಗದ ವಿಶೇಷ ತನಿಖಾ ತಂಡ ಭದ್ರತಾ ಪಡೆಗಳಿಗೆ ಕ್ಲೀನ್ ಚಿಟ್ ನೀಡಿದೆ.

ನವದೆಹಲಿ: ಹೈದರ್ ಪೋರಾ ಎನ್ ಕೌಂಟರ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಜಮ್ಮು-ಕಾಶ್ಮೀರ ಪೊಲೀಸ್ ವಿಭಾಗದ ವಿಶೇಷ ತನಿಖಾ ತಂಡ ಭದ್ರತಾ ಪಡೆಗಳಿಗೆ ಕ್ಲೀನ್ ಚಿಟ್ ನೀಡಿದೆ.
ಓರ್ವ ನಾಗರಿಕ ವಿದೇಶಿ ಭಯೋತ್ಪಾದಕನಿಂದ ಹತ್ಯೆಯಾಗಿದ್ದರೆ, ಕಟ್ಟಡದ ಮಾಲಿಕ ಹಾಗೂ ಸ್ಥಳೀಯ ಉಗ್ರ, ಭಯೋತ್ಪಾದಕರು ಸ್ಥಳೀಯ ನಾಗರಿಕರನ್ನು ಗುರಾಣಿಯಾಗಿಸಿಕೊಂಡಿದ್ದರ ಪರಿಣಾಮ ನಡೆದ ಕ್ರಾಸ್ ಫೈರ್ ನಲ್ಲಿ ಮೃತಪಟ್ಟಿದ್ದರು.
ನ.15 ರಂದು ಪಾಕಿಸ್ತಾನಿ ಭಯೋತ್ಪಾದಕ ಹಾಗೂ ಇನ್ನೂ ಮೂರು ಮಂದಿ ಹೈದರ್ ಪೋರಾದಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದರು. ಮೃತಪಟ್ಟ ಎಲ್ಲರಿಗೂ ಭಯೋತ್ಪಾದಕರ ನಂಟಿತ್ತು ಎಂದು ಪೊಲೀಸ್ ಇಲಾಖೆ ಹೇಳಿತ್ತು.
ಮೂವರು ವ್ಯಕ್ತಿಗಳ ಕುಟುಂಬ ಸದಸ್ಯರು ತಮ್ಮವರು ಮುಗ್ಧರೆಂದು ಹೇಳಿದ್ದರು ಅಷ್ಟೇ ಅಲ್ಲದೇ ಪೊಲೀಸ್ ತನಿಖೆಗೆ ಆಗ್ರಹಿಸಿದ್ದರು. ಡಿ.28 ರಂದು ಎಸ್ ಐಟಿಯ ಮುಖ್ಯಸ್ಥ ಡಿಐಜಿ ಸುಜಿತ್ ಕೆ ವರ್ಚ್ಯುಯಲ್ ಆಗಿ ಭದ್ರತಾಪಡೆಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


