ಚಾಕು ಹಿಡಿದ ಕಳ್ಳನೊಡನೆ ಯುವತಿ ಏಕಾಂಗಿ ಹೋರಾಟ: ಜನರು ಹೆಣ್ಮಕ್ಕಳ ನೆರವಿಗೆ ಬರುವುದಿಲ್ಲ, ಆತ್ಮರಕ್ಷಣೆ ಕಲೆ ಕಲಿಯಿರಿ ಎಂದ ಯುವತಿ
20 ವರ್ಷದ ಕಾಲೇಜು ವಿದ್ಯಾರ್ಥಿನಿ ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸಿದ್ದಳು. ಮನೆಯ ಬಳಿಯ ಸ್ಟಾಪ್ ಮಿಸ್ಸಾಗಿದ್ದರಿಂದ ಮುಂದಿನ ಸ್ಟಾಪಿನಲ್ಲಿ ಆಕೆ ಇಳಿದಿದ್ದಳು.

ರೂರ್ಕೆಲ: ಮಧ್ಯರಾತ್ರಿ ಬಸ್ಸಿನಿಂದಿಳಿದು ಮನೆಗೆ ಹೋಗುತ್ತಿದ್ದ ವೇಳೆ ದುಷ್ಕರ್ಮಿಯೋರ್ವ ಜನರ ಸಮ್ಮುಖದಲ್ಲೇ ಚಾಕು ಹಿಡಿದು ಬೆದರಿಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
20 ವರ್ಷದ ಕಾಲೇಜು ವಿದ್ಯಾರ್ಥಿನಿ ರಾತ್ರಿ ಬಸ್ಸಿನಲ್ಲಿ ಪ್ರಯಾಣಿಸಿದ್ದಳು. ಮನೆಯ ಬಳಿಯ ಸ್ಟಾಪ್ ಮಿಸ್ಸಾಗಿದ್ದರಿಂದ ಮುಂದಿನ ಸ್ಟಾಪಿನಲ್ಲಿ ಆಕೆ ಇಳಿದಿದ್ದಳು. ಅಮ್ಮನೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಾ ಯುವತಿ ಮನೆಯ ಕಡೆಗೆ ಆ ಕತ್ತಲಲ್ಲಿ ಹೆಜ್ಜೆ ಹಾಕಿದ್ದಳು.
ಈ ಸಂದರ್ಭ ಅಪರಿಚಿತ ದುಷ್ಕರ್ಮಿಯೋರ್ವ ಆಕೆಯನ್ನು ಹಿಂಬಾಲಿಸಿದ್ದ. ಆಕೆಗೆ ಗೊತ್ತಾಗುವಷ್ಟರಲ್ಲಿ ಚಾಕು ತೆಗೆದು ಆಕೆಯ ಬಳಿ ಇದ್ದ ಒಡವೆ, ಮೊಬೈಲು, ಹಣವನ್ನು ನೀಡೆಂದು ಬೆದರಿಕೆ ಒಡ್ಡಿದ.
ದುಷ್ಕರ್ಮಿಯ ಬೆದರಿಕೆಗೆ ಬಗ್ಗದ ಯುವತಿ ಆತನಿಗೆ ಪ್ರತಿರೋಧ ಒಡ್ಡಿದರೂ ಪ್ರಯೋಜನವಾಗಲಿಲ್ಲ. ಆಕೆಯ ವಸ್ತುಗಳನ್ನು ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಆಕೆಯ ಸುತ್ತಮುತ್ತ ಜನರಿದ್ದರೂ ಯಾರೊಬ್ಬರೂ ಆಕೆಯ ಸಹಾಯಕ್ಕೆ ಧಾವಿಸಲಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ ಪ್ರತಿಯೊಬ್ಬ ಹೆಣ್ಣುಮಕ್ಕಳು ಆತ್ಮರಕ್ಷಣೆ ಕಲೆಯನ್ನು ಕಲಿತುಕೊಳ್ಳಬೇಕು. ಹೆಣ್ಣುಮಕ್ಕಳ ಸಹಾಯಕ್ಕೆ ಮೂರನೆಯವರನ್ನು ನೆಚ್ಚಿಕೊಳ್ಳುವುದು ಅಪಾಯಕಾರಿ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಸಿನಿಮೀಯ ರೀತಿಯಲ್ಲಿ 5.5 ಕೆಜಿ ಚಿನ್ನ ದರೋಡೆ
Related Article
ಕ್ಷಮೆ ಇರಲಿ: ಬಡ ಮಾಲೀಕನಿಗೆ ಕದ್ದ ವಸ್ತುಗಳನ್ನು ಹಿಂದಿರುಗಿಸಿದ ಕಳ್ಳರು!
ಮೈಸೂರು: ಆನೆ ದಂತ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು, ನಾಲ್ವರ ಬಂಧನ
ರೋಗಪೀಡಿತ ಮಕ್ಕಳಿಗೆ ಕ್ರಿಸ್ಮಸ್ ಉಡುಗೊರೆಯಾಗಿ ಕೊಡಲು ತಂದಿದ್ದ 100 ಐಪ್ಯಾಡ್ ಕಳ್ಳತನ
ಬೆಂಗಳೂರು: ಚಿನ್ನದ ಸರ ಕಳ್ಳತನ, ಆಸ್ಪತ್ರೆ ಸಿಬ್ಬಂದಿ ಬಂಧನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


