ದೇಶ

ಒಡಿಶಾ: ಆಕಾಶದಿಂದ ಧರೆಗಿಳಿದು ಬಂದ ತರಕಾರಿಗಳ ಬೆಲೆ: ಜನಸಾಮಾನ್ಯರು ನಿರಾಳ

ಈ ಬಾರಿ ಇಳುವರಿ ಚೆನ್ನಾಗಿ ಆಗಿರುವುದೇ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗುತ್ತಿದೆ.

ಒಡಿಶಾ: ಆಕಾಶದಿಂದ ಧರೆಗಿಳಿದು ಬಂದ ತರಕಾರಿಗಳ ಬೆಲೆ: ಜನಸಾಮಾನ್ಯರು ನಿರಾಳ
ಸಾಂದರ್ಭಿಕ ಚಿತ್ರ
Published On :

ಭುವನೇಶ್ವರ: ಬಹುತೇಕ ತರಕಾರಿಗಳ ಬೆಲೆ ಕೆಲವು ತಿಂಗಳುಗಳಿಂದ ದೇಶದೆಲ್ಲೆಡೆ ಗಗನಕ್ಕೇರಿತ್ತು. ಈ ನಡುವೆ ಒಡಿಶಾ ರಾಜ್ಯದಲ್ಲಿ ದುಬಾರಿ ದರದಲ್ಲಿ ಮಾರಾಟಗೊಳ್ಳುತ್ತಿದ್ದ ತರಕಾರಿಗಳ ಬೆಲೆ ಕುಸಿದಿದೆ.

ಈ ಬಾರಿ ಇಳುವರಿ ಚೆನ್ನಾಗಿ ಆಗಿರುವುದೇ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗುತ್ತಿದೆ. ತರಕಾರಿಗಳ ಬೆಲೆ ಅರ್ಧಕ್ಕರ್ಧ ಕಡಿತಗೊಂಡಿರುವುದಾಗಿ ತಿಳಿದುಬಂದಿದೆ. 

ಕಾಲಿಫ್ಲವರ್ ಈ ಹಿಂದೆ ಪ್ರತಿ ಕೆ.ಜಿ 40 ರೂ.ಗಳಿಗೆ ಮಾರಾಟಗೊಳ್ಳುತ್ತಿತ್ತು. ಇದೀಗ್ 20 ರೂ.ಗೆ ಮಾರಾಟವಾಗುತ್ತಿದೆ. 

ಕಿಲೊ 30 ರೂ. ಬದನೆಕಾಯಿಗೆ ಈಗ 15 ರೂ. ಅದೇ ರೀತಿ ಟೊಮೆಟೊ, ಕುಂಬಳಕಾಯಿ ಬೆಲೆಗಳೂ ಅರ್ಧಕ್ಕರ್ಧ ಕಡಿತಗೊಂಡಿವೆ. ಇದರಿಂದಾಗಿ ಜನಸಾಮಾನ್ಯರು ನಿಟ್ಟುಸಿರುಬಿಡುವಂತಾಗಿದ್ದು ರಾಜ್ಯದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.