ದೇಶ

ವೋಟರ್ ಐಡಿ ಜೊತೆ ಆಧಾರ್ ಲಿಂಕ್ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ

ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ರಾಜ್ಯಸಭೆಯ ಧ್ವನಿ ಮತದ ಅಂಗೀಕಾರದೊಂದಿಗೆ ಮಂಗಳವಾರ ಚುನಾವಣಾ ಕಾನೂನುಗಳು ( ತಿದ್ದುಪಡಿ) ಮಸೂದೆ 2021ಕ್ಕೆ ಸಂಸತ್ತು ಅನುಮೋದನೆ ನೀಡಿತು.

ವೋಟರ್ ಐಡಿ ಜೊತೆ ಆಧಾರ್ ಲಿಂಕ್ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ
ರಾಜ್ಯಸಭೆ
Published On :

ನವದೆಹಲಿ: ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ರಾಜ್ಯಸಭೆಯ ಧ್ವನಿ ಮತದ ಅಂಗೀಕಾರದೊಂದಿಗೆ ಮಂಗಳವಾರ ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ 2021ಕ್ಕೆ ಸಂಸತ್ತು ಅನುಮೋದನೆ ನೀಡಿತು.

ನಕಲಿ ಮತದಾರರ ಸಮಸ್ಯೆಯನ್ನು ತೊಡೆದು ಹಾಕಲು ವೋಟರ್ ಐಡಿ ಜೊತೆಗೆ ಆಧಾರ್ ಕಾರ್ಡ್ ಸೇರ್ಪಡೆ ಮಾಡುವ ಮಸೂದೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು.

ವಿಪಕ್ಷಗಳು ನಿರ್ಣಯದೊಂದಿಗೆ ಅದನ್ನು ಸೆಲೆಕ್ಟ್ ಕಮಿಟಿಗೆ  ಕಳುಸಿಬೇಕೆಂದು ಒತ್ತಾಯಿಸಿದರು. ಆದರೆ ಅದಕ್ಕೆ ಧ್ವನಿಮತದಲ್ಲಿ ಸೋಲಾಯಿತು. ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು, ಡಿಎಂಕೆ ಮತ್ತು ಎನ್ ಸಿಪಿ ಮತ್ತಿತರ ಪ್ರತಿಪಕ್ಷಗಳ ಸದಸ್ಯರು ಸದನದಿಂದ ನಿರ್ಗಮಿಸಿದರು.

ಆದರೆ, ಬಿಜೆಪಿ,ಜೆಡಿಯು, ವೈಎಸ್ ಆರ್ ಸಿಪಿ, ಎಐಎಡಿಎಂಕೆ, ಬಿಜೆಡಿ ಮತ್ತು ಟಿಎಂಸಿ- ಎಂ, ಮಸೂದೆಯನ್ನು ಬೆಂಬಲಿಸಿದ ನಂತರ ರಾಜ್ಯಸಭೆ ಅಂಗೀಕಾರ ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.