ದೇಶ

ಮೋಹನ್ ಭಾಗವತ್, ಮುಲಾಯಂ ಸಿಂಗ್ ಯಾದವ್ ಜೊತೆಗಿರುವ ಫೋಟೊ ವೈರಲ್; ಕಾಂಗ್ರೆಸ್ ಅಣಕ

ವಿವಾದ ಕುರಿತಾಗಿ ಸ್ಪಷ್ಟನೆ ನೀಡಿರುವ ಸಮಾಜವಾದಿ ಪಕ್ಷ ಈ ಫೋಟೊ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಆರತಕ್ಷತೆ ಸಂದರ್ಭದಲ್ಲಿ ತೆಗೆದಿದ್ದೆಂದು ಹೇಳಿ ಪರಿಸ್ಥಿತಿ ತಣ್ಣಗಾಗಿಸಲು ಯತ್ನಿಸಿದೆ.

ಮೋಹನ್ ಭಾಗವತ್, ಮುಲಾಯಂ ಸಿಂಗ್ ಯಾದವ್ ಜೊತೆಗಿರುವ ಫೋಟೊ ವೈರಲ್; ಕಾಂಗ್ರೆಸ್ ಅಣಕ
ವಿವಾದಕ್ಕೆ ಕಾರಣವಾದ ಫೋಟೊ
Published On :

ನವದೆಹಲಿ: ಚುನಾವಣಾಗ್ರಸ್ಥ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕರ ಮನೆಗಳ ಮೇಲೆ ಐಟಿ ದಾಳಿಯಾದ ಎರಡು ದಿನಗಳ ತರುವಾಯ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಅವರ ಜೊತೆಗೆ ಕುಳಿತಿರುವ ಫೋಟೊ ಬಿಡುಗಡೆಯಾಗಿ ವಿವಾದ ಸೃಷ್ಟಿಸಿದೆ. 

ವಿವಾದ ಕುರಿತಾಗಿ ಸ್ಪಷ್ಟನೆ ನೀಡಿರುವ ಪಕ್ಷ ಈ ಫೋಟೊ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಆರತಕ್ಷತೆ ಸಂದರ್ಭದಲ್ಲಿ ತೆಗೆದಿದ್ದೆಂದು ಹೇಳಿ ಪರಿಸ್ಥಿತಿ ತಣ್ಣಗಾಗಿಸಲು ಯತ್ನಿಸಿದೆ.

ಈ ಫೋಟೋವನ್ನು ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಅವರು ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಅರ್ಜುನ್ ಅವರು ತಮ್ಮ ಜನ್ಮದಿನದ ಸಂದರ್ಭ ಭಾಗವತ್ ಅವರ ಆಶೀರ್ವಾದ ಪಡೆಯಲು ಮುಂದಾಗಿದ್ದರು. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚ್ಕೊಂಡಿದ್ದರು. ಆ ಫೋಟೋದ ಇನ್ನೊಂದು ಬದಿಯಲ್ಲಿ ಮುಲಾಯಂ ಅವರು ಆಸೀನರಾಗಿದ್ದು ಇದೀಗ ವಿವಾದ ಸೃಷ್ಟಿಸಿದೆ. 

ಈ ಕುರಿತಾಗಿ ಟೀಕಿಸಿರುವ ಉತ್ತರಪ್ರದೇಶ ಕಾಂಗ್ರೆಸ್ ಎಸ್ ಪಿ ಪಕ್ಷದ ಹೆಸರಿನಲ್ಲಿ ಎಸ್ ಎಂದರೆ ಸಂಘವಾದ ಇರಬೇಕು ಎಂದು ಅಣಕವಾಡಿದೆ.
ಇದನ್ನೂ ಓದಿ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ: ಮುಂಚೂಣಿಯಲ್ಲಿ ಟಿಎಂಸಿ; ಬಿಜೆಪಿ, ಕಾಂಗ್ರೆಸ್, ಸಿಪಿಎಂ ಮೂಲೆಗುಂಪು ಎಂದ ಮಮತಾ ಬ್ಯಾನರ್ಜಿ

Related Article

ಲಖಿಂಪುರ ಹಿಂಸಾಚಾರ: ಅಜಯ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪ್ರಧಾನಿ ಮೋದಿ ವಿಫಲ- ರಾಹುಲ್ ಗಾಂಧಿ

ಮಹಿಳಾ ಸ್ವ ಸಹಾಯ ಸಂಘಗಳ ಬ್ಯಾಂಕ್ ಖಾತೆಗಳಿಗೆ ರೂ.1,000 ಕೋಟಿ ವರ್ಗಾಯಿಸಿದ ಪ್ರಧಾನಿ ಮೋದಿ

ಭಾರತದಲ್ಲಿ ಈವರೆಗೆ 200 ಓಮಿಕ್ರಾನ್ ಕೇಸು ಪತ್ತೆ; 5,326 ಹೊಸ ಕೋವಿಡ್ ಪ್ರಕರಣ, 453 ಸಾವು

ರಾಜಧಾನಿ ದೆಹಲಿ ಚಳಿಗೆ ತತ್ತರ, 4 ಡಿಗ್ರಿ ಸೆ. ತಾಪಮಾನ ದಾಖಲು, ಪಂಜಾಬ್ ನ ಅಮೃತಸರದಲ್ಲಿ ತೀವ್ರ ಶೀತಗಾಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.