2 ವರ್ಷಗಳಲ್ಲಿ 7 ಐಎಎಫ್ ವಿಮಾನಗಳು ಪತನ: ಸರ್ಕಾರದ ಮಾಹಿತಿ
ಭಾರತೀಯ ವಾಯುಪಡೆಗೆ ಸೇರಿದ್ದ 7 ವಿಮಾನಗಳು ಕಳೆದ 2 ವರ್ಷಗಳಲ್ಲಿ ಪತನಗೊಂಡಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ್ದ 7 ವಿಮಾನಗಳು ಕಳೆದ 2 ವರ್ಷಗಳಲ್ಲಿ ಪತನಗೊಂಡಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಪ್ರಶ್ನೆಗಳಿಗೆ ಉತ್ತರಿಸಿದ್ದು, ಪ್ರತಿ ಐಎಎಫ್ ವಿಮಾನ ಪತನದ ಪ್ರಕರಣದ ಬಗ್ಗೆಯೂ ಪ್ರತ್ಯೇಕ ಸಮಿತಿಗಳಿಂದ ತನಿಖೆ ಮಾಡಿಸಲಾಗುತ್ತಿದೆ ಎಂದು ಲೊಕಸಭೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಪತನಗೊಂಡ ಮಿರಾಜ್-2000 ವಿಮಾನವೂ ಸೇರಿದಂತೆ ಎರಡು ವರ್ಷಗಳಲ್ಲಿ 7 ವಿಮಾನಗಳು ಪತನಗೊಂಡಿದೆ. ಅಪಘಾತಕಗಳಿಗೆ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ.
ಅಪಘಾತದ ಡೇಟಾ ಬೇಸ್ ಸಂಗ್ರಹಿಸುವುದು, ತರಬೇತಿ ವಿಧಾನವನ್ನು ಸುಧಾರಿಸುವುದು ಮತ್ತು ಸಿಮ್ಯುಲೇಟರ್‌ಗಳ ಬಳಕೆಯನ್ನು ಹೆಚ್ಚಿಸುವುದು, ಏರೋಸ್ಪೇಸ್ ಸುರಕ್ಷಾ ಸಂಘಟನೆಯನ್ನು ಉತ್ತೇಜಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


